alex Certify ‘ಉದ್ಯೋಗ’ ತೊರೆದು ಸ್ವಂತ ದುಡಿಮೆಯಲ್ಲಿ ಲಕ್ಷಾಂತರ ರೂ. ಗಳಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಉದ್ಯೋಗ’ ತೊರೆದು ಸ್ವಂತ ದುಡಿಮೆಯಲ್ಲಿ ಲಕ್ಷಾಂತರ ರೂ. ಗಳಿಸಲು ಇಲ್ಲಿದೆ ಟಿಪ್ಸ್

ಸ್ವಂತ ವ್ಯವಹಾರ, ಕೃಷಿ ಮಾಡಲು ಬಯಸುವವರು, ಹೆಚ್ಚು ಬೆಳೆ, ಬೆಲೆ ಸಿಗುವ ಕೃಷಿ ಶುರು ಮಾಡಬಹುದು. ಇಲ್ಲಿಯವರೆಗೆ ಭಾರತಕ್ಕೆ ವಿದೇಶದಿಂದ ಹಿಂಗು ಆಮದಾಗ್ತಿತ್ತು. ಆದ್ರೀಗ ಭಾರತದಲ್ಲಿ ಹಿಂಗು ಬೆಳೆಯಲು ಶುರು ಮಾಡಿದ್ದಾರೆ. ಈ ಲಾಭಕರ ಬೆಳೆ ಬೆಳೆದು, ನೀವೂ ಪ್ರತಿ ತಿಂಗಳು 3 ಲಕ್ಷ ರೂಪಾಯಿವರೆಗೆ ಗಳಿಸಬಹುದು.

ಹಿಂಗಿನ ಬೆಲೆ, ಹಿಂಗಿನ ಗುಣಮಟ್ಟವನ್ನು ಅವಲಂಬಿಸಿದೆ. ಭಾರತದಲ್ಲಿ ಶುದ್ಧ ಹಿಂಗಿನ ಬೆಲೆ ಪ್ರತಿ ಕೆಜಿಗೆ 35 ರಿಂದ 40 ಸಾವಿರ ರೂಪಾಯಿಯಿದೆ. ಹಿಂಗಿನ ಬೀಜವನ್ನು ಗ್ರೀನ್ ಹೌಸ್ ನಲ್ಲಿ ಎರಡು –ಎರಡು ಫೀಟ್ ಅಂತರದಲ್ಲಿ ಹಾಕಲಾಗುತ್ತದೆ. ಗಿಡ ಬೆಳೆಯುತ್ತಿದ್ದಂತೆ ಅದನ್ನು 5 ಅಡಿ ದೂರಕ್ಕೆ ನೆಡಬೇಕು. ನೆಲದಲ್ಲಿರುವ ನೀರಿನಾಂಶ ನೋಡಿ ನಂತ್ರ ನೀರು ಸಿಂಪಡಿಸಬೇಕು. ಹಿಂಗಿನ ಗಿಡವು ಮರವಾಗಲು 5 ​​ವರ್ಷಗಳು ಬೇಕಾಗುತ್ತದೆ. ಬೇರು ಹಾಗೂ ಕಾಂಡಗಳಿಂದ ಗಮ್ ತೆಗೆಯಲಾಗುತ್ತದೆ.

ದೊಡ್ಡ ಪ್ರಮಾಣದಲ್ಲಿ ಹಿಂಗು ಬೆಳೆ ಬೆಳೆಯಲು ಕನಿಷ್ಠ 5 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ. ಯಂತ್ರಗಳಿಗೆ ಖರ್ಚು ಮಾಡಬೇಕಾಗುತ್ತದೆ. ಈ ವ್ಯವಹಾರ ಶುರು ಮಾಡಲು ಐಡಿ ಪುರಾವೆ, ವಿಳಾಸ ಪುರಾವೆ, ಜಿಎಸ್ಟಿ ಸಂಖ್ಯೆ, ವ್ಯಾಪಾರದ ಪಾನ್ ಕಾರ್ಡ್ ಸೇರಿದಂತೆ ಅನೇಕ ದಾಖಲೆ ಬೇಕಾಗುತ್ತದೆ.

ಅಂದಾಜಿನ ಪ್ರಕಾರ, ಒಂದು ತಿಂಗಳಲ್ಲಿ 5 ಕೆಜಿ ಹಿಂಗು ಮಾರಾಟ ಮಾಡಿದ್ರೆ, ತಿಂಗಳಿಗೆ 2,00,000 ರೂಪಾಯಿಗಳನ್ನು ಗಳಿಸಬಹುದು. ದೊಡ್ಡ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಉತ್ತಮ ಗುಣಮಟ್ಟದ ಹಿಂಗು ಮಾರಾಟ ಮಾಡಿದ್ರೆ ಪ್ರತಿ ತಿಂಗಳು 3 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...