alex Certify ಮದುವೆಗೆ ಬಂದವನಿಂದ ಅತಿಥಿಗಳ ಮೇಲೆ ನೋಟಿನ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಬಂದವನಿಂದ ಅತಿಥಿಗಳ ಮೇಲೆ ನೋಟಿನ ಸುರಿಮಳೆ

ಲಾಸ್ ವೆಗಾಸ್: ಸಾಂಪ್ರದಾಯಿಕ ಪಾಶ್ಚಿಮಾತ್ಯ ಶೈಲಿಯ ವಿವಾಹದಲ್ಲಿ ವಧುವಿನ ಜತೆ ಒಬ್ಬ ಹುಡುಗಿಯು ಹೂವು ಹಿಡಿದುಕೊಂಡು ಬರುವ ದೃಶ್ಯ ಸಾಮಾನ್ಯ. ಆದರೆ ಇಲ್ಲೊಂದೆಡೆ ಹುಡುಗಿಯ ಬದಲು ಪುರುಷನೊಬ್ಬ ಹಣವನ್ನು ಎಸೆಯುತ್ತಾ ಎಂಟ್ರಿ ಕೊಟ್ಟಿದ್ದಾನೆ.

ಲಾಸ್ ವೆಗಾಸ್ ನಲ್ಲಿ ನಡೆದ ವಿವಾಹದ ಕಾರ್ಯಕ್ರಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ವಧು ಎಂಟ್ರಿಗೆ ಅತಿಥಿಗಳು ಕಾದು ಕೂತಿದ್ದರು. ಈ ವೇಳೆ ಗಡ್ಡಧಾರಿ ವ್ಯಕ್ತಿಯೊಬ್ಬ ಆಗಮಿಸಿ, ಅತಿಥಿಗಳತ್ತ ಕಂತೆ ಕಂತೆ ನೋಟುಗಳನ್ನು ಎಸೆದಿದ್ದಾನೆ.

ಒಂದರೆಕ್ಷಣ ದಿಗ್ಭ್ರಮೆಗೊಂಡ ಅತಿಥಿಗಳು ಬಳಿಕ ನಗುನಗುತ್ತಲೇ ದೃಶ್ಯದ ವಿಡಿಯೋ ಚಿತ್ರೀಕರಣ ಮಾಡಿದರು. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ‘’ನೀವು ಹಣದ ವ್ಯಕ್ತಿಯನ್ನು ಹೊಂದಿರುವಾಗ ಹೂವಿನ ಹುಡುಗಿ ಯಾಕೆ ಬೇಕು’’ ಶೀರ್ಷಿಕೆ ನೀಡಲಾಗಿದೆ.

ಟೋಕಿಯೋ ಒಲಿಂಪಿಕ್ಸ್​ಗೂ ಕೋವಿಡ್​ ಕರಿನೆರಳು: ಮುಂದಿನ ಕ್ರಮದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆಡಳಿತ ಮಂಡಳಿ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, 13 ಮಿಲಿಯನ್ ಜನರು ವೀಕ್ಷಿಸಿದ್ದರೆ, 2.5 ಮಿಲಿಯನ್ ಜನರು ಲೈಕ್ ನೀಡಿದ್ದಾರೆ. ಹಣ ಎಸೆದರೂ ಯಾಕೆ ಅಲ್ಲಿದ್ದವರು ಹೆಕ್ಕಿಲ್ಲ ಅಂತಾ ಒಬ್ಬ ಕಮೆಂಟ್ ಮಾಡಿದ್ದರೆ, ಮತ್ತೊಬ್ಬ ನಾನಾಗಿದ್ದರೆ ಪ್ರತಿಯೊಂದು ಹಣವನ್ನು ಆರಿಸುತ್ತಾ ಅಲ್ಲೆ ಇದ್ದು ಬಿಡುತ್ತಿದ್ದೆ ಅಂತಾ ಕಮೆಂಟ್ ಮಾಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...