ಬೆಂಗಳೂರು : ಅಂಭಾಭವಾನಿ ಲೇಔಟ್ ನಲ್ಲಿ ನಿವೃತ್ತ ಶಿಕ್ಷಕಿ ಪ್ರಸನ್ನ ಕುಮಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿರುಪತಿಯಲ್ಲಿ ತಲೆಮರೆಸಿಕೊಂಡಿದ್ದ ಇರ್ಫಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. 2022 ರಲ್ಲಿ ನವೋದಯ ಶಾಲೆಯ ನಿವೃತ್ತಿ ಶಿಕ್ಷಕಿ ಪ್ರಸನ್ನ ಕುಮಾರಿಯನ್ನು ಹತ್ಯೆಗೈಯಲಾಗಿತ್ತು, ಪಕ್ಕದ ಮನೆಯ ನಾಗೇಂದ್ರ ಎಂಬಾತ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ನಿವೃತ್ತಿಯಾದ ಶಿಕ್ಷಕಿ ಬಳಿ ಭಾರಿ ಹಣವಿದೆ ಎಂದು ತಿಳಿದ ನಾಗೇಂದ್ರ ತನ್ನ ಸ್ನೇಹಿತ ಇರ್ಫಾನ್ ಗೆ ಹೇಳಿ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಮೃತ ಪ್ರಸನ್ನಕುಮಾರಿ ಆಂಧ್ರಪ್ರದೇಶದ ವಿಜಯವಾಡದವರಾಗಿದ್ದು, ಕೇಂದ್ರ ಸರ್ಕಾರದ ನವೋದಯ ವಸತಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕೆಲವು ವರ್ಷ ಅವರು ಮೈಸೂರಿನಲ್ಲಿ ನೆಲೆಸಿದ್ದರು. ನಂತರ ಬೆಂಗಳೂರಿಗೆ ಬಂದಿದ್ದರು. ಪ್ರಸನ್ನ ಕುಮಾರಿಗೆ ಮಕ್ಕಳಿರಲಿಲ್ಲ, ಪತಿ ಕೂಡ ನಿಧನರಾಗಿದ್ದರು. ಆದ್ದರಿಂದ ಅವರು ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು .ಸೆ.8 ರಂದು ಇರ್ಫಾನ್ ನನ್ನು ಮನೆಗೆ ಕರೆಸಿಕೊಂಡ ನಾಗೇಂದ್ರ ಪ್ರಸನ್ನಕುಮಾರಿ ಮನೆಗೆ ತೆರಳಿ ಅವರ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕೊಂದಿದ್ದರು. ನಂತರ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.