ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರೆದಿದ್ದು, ವಿಷ ಸೇವಿಸಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಕಲಗೂಡು/ಹನುಮಸಾಗರದಲ್ಲಿ ನಡೆದಿದೆ.
ಅರಕಲಗೂಡಿನ ಕೇಶವಯ್ಯ (61) ಕೊಪ್ಪಳದ ಯಂಕಪ್ಪ ಬಂಗಿ (28) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಳ್ಳುಮುದ್ದನಹಳ್ಳಿಯಲ್ಲಿ ಮನೆ ಹರಾಜಿಗೆ ನೋಟಿಸ್ ಅಂಟಿಸಿದ್ದರಿಂದ ಬೇಸತ್ತು ಕೇಶವಯ್ಯ (61) ಎಂಬುವವರು ಸೂಸೈಡ್ ಮಾಡಿಕೊಂಡಿದ್ದಾರೆ.ಕೊಪ್ಪಳ ಜಿಲ್ಲೆಯ ಬೆನಕನಾಳ ಗ್ರಾಮದಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕ ಯಂಕಪ್ಪ ಬಂಗಿ (38) ಎಂಬುವವರು ಸೂಸೈಡ್ ಮಾಡಿಕೊಂಡಿದ್ದಾರೆ.
ಕೇಶವಯ್ಯ ಮನೆ ಕಟ್ಟಲು ಫೈನಾನ್ಸ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಯಂಕಪ್ಪ ಸರ್ಕಾರಿ ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಇಬ್ಬರು ಕೂಡ ಸಾಲ ತೀರಿಸಲಾಗದೇ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.