ಡಿಜಿಟಲ್ ಡೆಸ್ಕ್ : ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ದೆಹಲಿ ಮೂಲದ ರಾಜೀವ್ ಸಿಂಗ್ ಎಂದು ಗುರುತಿಸಲಾಗಿದೆ. ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಖತರ್ ನಾಕ್ ಖದೀಮ ಇದೀಗ ಅಂದರ್ ಆಗಿದ್ದಾನೆ.
ಬಂಧಿತನಿಂದ 522 ಅಂಕಪಟ್ಟಿ , 1,626 ಖಾಲಿ ಪೇಪರ್, 122 ನಕಲಿ ಸೀಲ್, 1 ಪ್ರಿಂಟರ್ ಎಟಿಎಂ ಕಾರ್ಡ್ ವಶಕ್ಕೆ ಪಡೆದು 85 ಬ್ಯಾಂಕ್ ಖಾತೆಗಳಿರುವುದನ್ನು ಪತ್ತೆ ಹಚ್ಚಲಾಗಿದೆ.
7-8 ವರ್ಷದಿಂದ ಈತ ಮಾರ್ಕ್ಸ್ ಕಾರ್ಡ್ ದಂಧೆ ಮಾಡಿಕೊಂಡು ಬಂದಿದ್ದನು. ಆರೋಪಿಯನ್ನು ಬಂಧಿಸಿರುವ CEN ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.