alex Certify Good News: ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಮತ್ತೊಂದು ಇ ಸ್ಕೂಟರ್‌ ಲಗ್ಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಮತ್ತೊಂದು ಇ ಸ್ಕೂಟರ್‌ ಲಗ್ಗೆ

ದೇಶದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಲಗ್ಗೆ ಇಡಲು ಬಹಳ ದಿನಗಳಿಂದ ಸಿದ್ಧತೆ ಮಾಡಿಕೊಂಡು ಬರುತ್ತಿರುವ ಬೌನ್ಸ್‌ ಇನ್ಫಿನಿಟಿ ಸ್ಟಾರ್ಟ್‌ ಅಪ್‌ ಶೀಘ್ರದಲ್ಲೇ ತನ್ನ ಮೊದಲ ಸ್ಕೂಟರ್‌ ಲಾಂಚ್‌ ಮಾಡುವ ದಿನಾಂಕ ಘೋಷಿಸಿದೆ.

ಡಿಸೆಂಬರ್‌ 2ರಂದು ಬೌನ್ಸ್‌ ಇನ್ಫಿನಿಟಿಯ ಇ-ಸ್ಕೂಟರ್‌‌ನ ಬೆಲೆಯನ್ನು ಬಹಿರಂಗಗೊಳಿಸಲಾಗುವುದು. ಇದೇ ದಿನದಿಂದ ಬೌನ್ಸ್‌ ಇನ್ಫಿನಿಟಿಯ ಇ-ಸ್ಕೂಟರ್‌‌ಗೆ ಬುಕಿಂಗ್ ಆರಂಭಗೊಳ್ಳಲಿದೆ. 499 ರೂಪಾಯಿ ಟೋಕನ್ ಮೊತ್ತವನ್ನು ಕೊಟ್ಟು ಬೌನ್ಸ್‌ ಇ-ಸ್ಕೂಟರ್‌ ಬುಕ್ ಮಾಡಬಹುದಾಗಿದೆ.

ಬದಲಾದ ಪಾರ್ಕಿಂಗ್ ನಿಯಮದ ಅರಿವಿಲ್ಲದೇ 34,000 ರೂ. ದಂಡ ಕಟ್ಟಿದ ಬರ್ಗರ್‌ ಪ್ರಿಯ

ಈ ಸ್ಕೂಟರ್‌ನಲ್ಲಿ ಬದಲಿಸಬಲ್ಲ ಬ್ಯಾಟರಿ ನೀಡಲಾಗಿದೆ. ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬ್ಯಾಟರಿಗಳನ್ನೂ ಬಾಡಿಗೆಗೆ ನೀಡಲಿದೆ ಬೌನ್ಸ್‌ ಇನ್ಫಿನಿಟಿ. ಈ ಮೂಲಕ ಸ್ಕೂಟರ್‌ನ ನಿರ್ವಹಣಾ ವೆಚ್ಚವನ್ನು ಆದಷ್ಟು ಕಡಿಮೆ ಮಾಡುವುದು ಕಂಪನಿಯ ಉದ್ದೇಶವಾಗಿದೆ.

ಸ್ಕೂಟರ್‌ನ ಬಹುತೇಕ ಭಾಗಗಳನ್ನು ಭಾರತದಲ್ಲೇ ಉತ್ಪಾದಿಸಿದರೂ ಸಹ ಬ್ಯಾಟರಿ ಕೋಶಗಳನ್ನು ಎಲ್‌ಜಿ ಕೆಮ್ ಮತ್ತು ಪ್ಯಾನಾಸೋನಿಕ್‌ನಿಂದ ತರಿಸಿಕೊಳ್ಳಲಾಗುತ್ತದೆ.

ಬುಕಿಂಗ್ ಮಾಡಿದ ತಿಂಗಳ ಬಳಿಕ ಸ್ಕೂಟರ್‌ಗಳನ್ನು ಡೆಲಿವರಿ ಮಾಡಲಾಗುವುದು ಎಂದು ಬೌನ್ಸ್ ತಿಳಿಸಿದ್ದು, ಜನವರಿ 2022ರಿಂದ ಡೆಲಿವರಿಗಳನ್ನು ಆರಂಭಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...