alex Certify BIG NEWS : ‘ನನ್ನ ಗುರುತು’ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ, ಏನಿದರ ಪ್ರಯೋಜನ ತಿಳಿಯಿರಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ನನ್ನ ಗುರುತು’ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ, ಏನಿದರ ಪ್ರಯೋಜನ ತಿಳಿಯಿರಿ.!

ಬೆಂಗಳೂರು : ‘ನನ್ನ ಗುರುತು’ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಗೆ ಅವಶ್ಯವಿರುವ 13 ಮೂಲ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿ/ನವೀಕರಣಗೊಳಿಸಿ, ದಾಖಲೆ ಇಲ್ಲದವರನ್ನು ಗುರುತಿಸಿ ನೂತನ ದಾಖಲೆಗಳನ್ನು ಒದಗಿಸುವ ಸಲುವಾಗಿ ನಮ್ಮ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ‘ನನ್ನ ಗುರುತು’ ಎಂಬ ಅಭಿಯಾನ ಆರಂಭಿಸಿದೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ‘ನನ್ನ ಗುರುತು’ ಅಭಿಯಾನದ ಮೂಲಕ ಇದೀಗ ನಿಮ್ಮ ಗುರುತನ್ನು ಸುರಕ್ಷಿತಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಜ್ಜಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಜನತೆಗೆ ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ಹತ್ತು ಹಲವಾರು ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಒದಗಿಸುತ್ತಿದೆ. ಆದರೆ ಕೆಲವೊಮ್ಮೆ ಈ ಸಮುದಾಯದ ಜನತೆಗೆ ಅರಿವಿಲ್ಲದೆ ಅಥವಾ ಸೂಕ್ತ ದಾಖಲೆಗಳ ಲಭ್ಯತೆಯಿಲ್ಲದೆ ಇಂತಹ ಸಾಕಷ್ಟು ಸೌಲಭ್ಯಗಳಿಂದ ವಂಚಿತರಾಗುವ ಸ್ಥಿತಿ ಎದುರಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಗೆ ಅವಶ್ಯವಿರುವ 13 ಮೂಲ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿ/ನವೀಕರಣಗೊಳಿಸಿ, ದಾಖಲೆ ಇಲ್ಲದವರನ್ನು ಗುರುತಿಸಿ ನೂತನ ದಾಖಲೆಗಳನ್ನು ಒದಗಿಸುವ ಸಲುವಾಗಿ ನಮ್ಮ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ‘ನನ್ನ ಗುರುತು’ ಎಂಬ ಅಭಿಯಾನ ಆರಂಭಿಸಿದೆ. ಮೊದಲ ಹಂತದಲ್ಲಿ ಚಾಮರಾಜನಗರ ಜಿಲ್ಲೆ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಅಭಿಯಾನವನ್ನು ಕಾರ್ಯಗತಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳು ಸರ್ಕಾರದ ಯಾವುದೇ ಸೌಲಭ್ಯ ಪಡೆಯುವಲ್ಲಿ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ಧ್ಯೇಯವಾಗಿದೆ ಎಂದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...