alex Certify BIG NEWS: ರೈತನ ಮಗನಿಗೆ ಬರೋಬ್ಬರಿ 1.8 ಕೋಟಿ ರೂಪಾಯಿ ವಾರ್ಷಿಕ ವೇತನದ ‘ಉದ್ಯೋಗ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೈತನ ಮಗನಿಗೆ ಬರೋಬ್ಬರಿ 1.8 ಕೋಟಿ ರೂಪಾಯಿ ವಾರ್ಷಿಕ ವೇತನದ ‘ಉದ್ಯೋಗ’

ಕೋಲ್ಕತ್ತಾದ ಹೆಸರಾಂತ ಜಾಧವ್ ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಬೈಸಾಕ್ ಮೊಂಡಲ್ ಅವರಿಗೆ ಫೇಸ್ ಬುಕ್ ಭಾರೀ ಆಫರ್ ನೀಡಿದೆ. ಕಂಪ್ಯೂಟರ್ ಸೈನ್ಸ್ ನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿರುವ ಮೊಂಡಲ್ ಗೆ ಲಂಡನ್ ನಲ್ಲಿ ಉದ್ಯೋಗ ನೀಡಲು ನಿರ್ಧರಿಸಿರುವ ಫೇಸ್ ಬುಕ್, ಇದಕ್ಕಾಗಿ ಅವರಿಗೆ ನಿಗದಿ ಮಾಡಿರುವ ವಾರ್ಷಿಕ ಸಂಬಳ ಬರೋಬ್ಬರಿ 1.8 ಕೋಟಿ ರೂಪಾಯಿಗಳು..! ಅಂದರೆ, ತಿಂಗಳಿಗೆ 9 ಲಕ್ಷ ರೂಪಾಯಿ ವೇತನ.

ಇದು ಈ ವರ್ಷ ಕಂಪನಿಯೊಂದು ನೀಡುತ್ತಿರುವ ಅತ್ಯಧಿಕ ಆಫರ್ ಆಗಿದೆ. ಮೊಂಡಲ್ ಈ ಉದ್ಯೋಗದ ಆಫರ್ ಅನ್ನು ಸ್ವೀಕರಿಸಿದ್ದು, ಮುಂದಿನ ಸೆಪ್ಟಂಬರ್ ವೇಳೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಬಿರ್ಭಮ್ ನ ರಾಮಪುರ್ಹಾತ್ ನ ರೈತ ಕುಟುಂಬಕ್ಕೆ ಸೇರಿದ ಮೊಂಡಲ್ ಅವರ ತಂದೆ ಕೃಷಿಕರಾಗಿದ್ದರೆ, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ತಮ್ಮ ಮಗನಿಗೆ ಬಂದಿರುವ ಆಫರ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮೊಂಡಲ್, ನಾನು ಮುಂದಿನ ಸೆಪ್ಟಂಬರ್ ನಲ್ಲಿ ಫೇಸ್ ಬುಕ್ ನಲ್ಲಿ ಉದ್ಯೋಗಕ್ಕೆ ಸೇರುವೆ. ಫೇಸ್ ಬುಕ್ ನಿಂದ ಆಫರ್ ಬರುವ ಮುನ್ನ ನನಗೆ ಗೂಗಲ್ ಮತ್ತು ಅಮೇಜಾನ್ ನಿಂದ ಉದ್ಯೋಗದ ಆಫರ್ ಗಳು ಬಂದಿದ್ದವು. ಆದರೆ, ಫೇಸ್ ಬುಕ್ ಉತ್ತಮ ವೇತನ ನೀಡುವ ಭರವಸೆ ನೀಡಿದ್ದರಿಂದ ನಾನು ಅವೆರಡೂ ಆಫರ್ ಗಳನ್ನು ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...