alex Certify BIG NEWS: ಉದ್ಘಾಟನೆಗೊಂಡ ಎರಡೇ ದಿನಕ್ಕೆ ಮುರಿದುಬಿತ್ತು ಮಲ್ಪೆ ತೇಲುವ ಸೇತುವೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉದ್ಘಾಟನೆಗೊಂಡ ಎರಡೇ ದಿನಕ್ಕೆ ಮುರಿದುಬಿತ್ತು ಮಲ್ಪೆ ತೇಲುವ ಸೇತುವೆ..!

ರಾಜ್ಯದಲ್ಲಿ ಪ್ರಥಮ ಹಾಗೂ ದೇಶದಲ್ಲಿ ಎರಡನೇ ಪ್ರಯತ್ನ ಎಂಬಂತೆ ನಿರ್ಮಾಣಗೊಂಡಿದ್ದ ಉಡುಪಿಯ ಮಲ್ಪೆ ಬೀಚ್​ನ ತೇಲುವ ಸೇತುವೆಯು ಗಾಳಿಯ ರಭಸಕ್ಕೆ ಕೊಚ್ಚಿ ಹೋಗಿದೆ. ಈ ಮೂಲಕ ಬರೋಬ್ಬರಿ 80 ಲಕ್ಷ ರೂಪಾಯಿ ಮೌಲ್ಯದ ಕಾಮಗಾರಿ ಹಳ್ಳ ಹಿಡಿದಂತಾಗಿದೆ.

ಎರಡು ದಿನಗಳ ಹಿಂದೆ ಶಾಸಕ ಕೆ. ರಘುಪತಿ ಭಟ್​ ಈ ತೇಲುವ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು. ಫೋಂಟೊನ್ಸ್​ ಬ್ಲಾಕ್​ಗಳಿಂದ ನಿರ್ಮಾಣಗೊಂಡಿದ್ದ ಈ ತೇಲುವ ಸೇತುವೆಯು ನಿಮಗೆ ಸಮುದ್ರದಲ್ಲಿ ತೇಲಿದ ಅನುಭವವನ್ನು ನೀಡುತ್ತಿತ್ತು. ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾದ್ದರಿಂದ ಕಳೆದ 2 ದಿನಗಳಿಂದ ತೇಲುವ ಸೇತುವೆಯನ್ನು ನೋಡಲು ಪ್ರವಾಸಿಗರ ದಂಡೇ ಇಲ್ಲಿಗೆ ಆಗಮಿಸುತ್ತಿತ್ತು.

100 ಮೀಟರ್​ ಉದ್ದ ಹಾಗೂ 3.5 ಮೀಟರ್​ ಅಗಲವನ್ನು ಹೊಂದಿರುವ ಈ ಸೇತುವೆಯನ್ನು ಹೆಚ್ಚಿನ ಸಾಂದ್ರತೆಯ ಫೋಂಟೊನ್ಸ್​ ಬ್ಲಾಕ್​ಗಳಿಂದ ನಿರ್ಮಾಣ ಮಾಡಲಾಗಿದೆ. ಜೊತೆಗೆ 12 ಮೀಟರ್​ ಉದ್ದ ಹಾಗೂ 7 ಮೀಟರ್​ ಅಗಲದ ವೇದಿಕೆ ಕೂಡ ಇದೆ. ಒಬ್ಬ ಪ್ರವಾಸಿಗ 15 ನಿಮಿಷಗಳ ಕಾಲ ತೇಲುವ ಸೇತುವೆ ಮೇಲೆ ಎಂಜಾಯ್​ ಮಾಡಬಹುದು. ಒಂದು ಬಾರಿಗೆ 100 ಪ್ರವಾಸಿಗರು ತೇಲುವ ಸೇತುವೆಯನ್ನು ಏರಬಹುದಾಗಿತ್ತು.

ಆದರೆ ಗಾಳಿಯ ರಭಸಕ್ಕೆ ಫೋಂಟೊನ್ಸ್​ ಬ್ಲಾಕ್​ಗಳು ಛಿದ್ರ ಛಿದ್ರವಾಗಿ ತೇಲುತ್ತಿದೆ. ಈ ಸೇತುವೆಯನ್ನು ಸರಿಪಡಿಸಲು ಒಂದು ವಾರಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರವಾಸಿಗರು ಇಲ್ಲದ ವೇಳೆಯಲ್ಲಿ ಫೋಂಟೊನ್ಸ್​ ಬ್ಲಾಕ್​ಗಳು ಕೊಚ್ಚಿ ಹೋಗಿವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...