alex Certify 8 ವರ್ಷದಿಂದ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ವರ್ಷದಿಂದ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಅರೆಸ್ಟ್

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಖತಿಜಾ ಮೆಹರಿನ್ ಬಂದಿತ ಪಾಕ್ ಮೂಲದ ಮಹಿಳೆ ಎಂದು ಹೇಳಲಾಗಿದೆ.

8 ವರ್ಷಗಳ ಹಿಂದೆ ದುಬೈನಲ್ಲಿ ಭಟ್ಕಳ ಮೂಲದ ಜಾವೀದ್ ಮೋಹಿದ್ದಿನ್ ರುಕ್ನುದ್ದಿನ್ ನನ್ನು ಮದುವೆಯಾಗಿದ್ದ ಖತೀಜಾ 2014ರಲ್ಲಿ ಪ್ರವಾಸಿ ವೀಸಾದೊಂದಿಗೆ ಮೂರು ತಿಂಗಳು ಭಾರತಕ್ಕೆ ಬಂದು ವಾಪಸ್ ಹೋಗಿದ್ದು, 2015 ರಲ್ಲಿ ಕಳ್ಳಮಾರ್ಗದ ಮೂಲಕ ಭಾರತಕ್ಕೆ ಬಂದು ನೆಲೆಸಿದ್ದಾಳೆ.

ಯಾವುದೇ ದಾಖಲೆ ನೀಡದೆ ಅಕ್ರಮವಾಗಿ ಪ್ರವೇಶಿಸಿ ಕಳೆದ 8 ವರ್ಷಗಳಿಂದ ನವಾಯತ್ ಕಾಲೋನಿಯಲ್ಲಿ ಮೂವರು ಮಕ್ಕಳೊಂದಿಗೆ ವಾಸವಾಗಿದ್ದ ಖತೀಜಾ ನಕಲಿ ದಾಖಲೆ ನೀಡಿ ಪಡಿತರ ಚೀಟಿ, ಮತದಾರರ ಚೀಟಿ ಸೇರಿದಂತೆ ಹಲವು ದಾಖಲೆ ಪಡೆದುಕೊಂಡಿದ್ದು, ಈ ಬಗ್ಗೆ ಮಾಹಿತಿ ಪಡೆದು ತನಿಖೆ ಕೈಗೊಂಡ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...