alex Certify ಅಪ್ರಾಪ್ತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿ ವಿರುದ್ಧ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿ ವಿರುದ್ಧ ದೂರು

ಬೆಂಗಳೂರಿನ 20 ವರ್ಷ ವಯಸ್ಸಿನ ಬಿಎಸ್​ಸಿ ನರ್ಸಿಂಗ್​ ವಿಭಾಗದ ವಿದ್ಯಾರ್ಥಿನಿ 17 ವರ್ಷದ ಅಪ್ರಾಪ್ತನನ್ನ ಮದುವೆಯಾದ ಆರೋಪದಡಿಯಲ್ಲಿ ಚಿಕ್ಕಮಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ಫೇಸ್​ಬುಕ್​ ಮೂಲಕ ಅಪ್ರಾಪ್ತನ ಸ್ನೇಹ ಸಂಪಾದಿಸಿದ್ದಳು.

ಅಪ್ರಾಪ್ತ ಚಿಕ್ಕಮಗಳೂರಿನ ನಿವಾಸಿಯಾಗಿದ್ದು 17 ವರ್ಷ ಪ್ರಾಯದ ಈತ 21 ವರ್ಷದವನು ಎಂದು ಸುಳ್ಳು ಹೇಳಿ ಈಕೆಯನ್ನ ಜೂನ್​ 16ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಈ ಮದುವೆ ಕಾರ್ಯಕ್ರಮದಲ್ಲಿ ಆತನ ಕುಟುಂಬಸ್ಥರೂ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲ್ಯ ವಿವಾಹ ತಡೆ ಕಾನೂನಿನ ಅಡಿಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ದಂಪತಿ ಪ್ರತ್ಯೇಕ ಮನೆಯಲ್ಲಿ ಜೀವನ ಮಾಡುತ್ತಿದ್ದರು ಎಂದು ಚಿಕ್ಕಮಗಳೂರು ಎಸ್​ಪಿ ಮಾಹಿತಿ ನೀಡಿದ್ದಾರೆ.

ಕುಟುಂಬಸ್ಥರ ವಿರೋಧದ ನಡುವೆಯೂ ಈ ಬಿಎಸ್​​ಸಿ ವಿದ್ಯಾರ್ಥಿನಿ ಅಪ್ರಾಪ್ತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು ಎನ್ನಲಾಗಿದೆ. ಇವರಿಬ್ಬರ ವಿವಾಹವನ್ನ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ನೆರವೇರಿಸಲಾಗಿತ್ತು. ಬಾಯಿಂದ ಬಾಯಿಗೆ ಈ ವಿಚಾರ ಹರಡಿ ಗ್ರಾಮಸ್ಥರಿಗೂ ಮಾಹಿತಿ ತಲುಪಿತ್ತು. ಗ್ರಾಮಸ್ಥರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಈ ಬಗ್ಗೆ ದೂರನ್ನ ನೀಡಿದ್ದರು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...