alex Certify ಉದ್ಯೋಗ ಕಳೆದುಕೊಂಡ ಪತಿ ಮಾಡ್ತಿದ್ದ ಕೆಲಸ ಗೊತ್ತಾಗಿ ವಿಚ್ಛೇದನ ಪಡೆದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಕಳೆದುಕೊಂಡ ಪತಿ ಮಾಡ್ತಿದ್ದ ಕೆಲಸ ಗೊತ್ತಾಗಿ ವಿಚ್ಛೇದನ ಪಡೆದ ಪತ್ನಿ

ಕೋವಿಡ್ ಲಾಕ್ಡೌನ್ ನಂತ್ರ ಕೆಲಸ ಕಳೆದುಕೊಂಡ ಬಿಪಿಓ ಪತಿಯೊಬ್ಬ ನಂತರ ಮಾಡ್ತಿದ್ದ ಕೆಲಸ ಪತ್ನಿಯನ್ನು ದಂಗು ಬಡಿಸಿದೆ. ವಿಷ್ಯ ಗೊತ್ತಾಗ್ತಿದ್ದಂತೆ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ನಾಲ್ಕು ಮಾತುಕತೆ ನಂತ್ರವೂ ರಾಜಿಯಾಗದ ಪತ್ನಿಗೆ ವಿಚ್ಛೇದನ ಸಿಕ್ಕಿದೆ.

ಇಷ್ಟಕ್ಕೂ ಪತಿ ಮಾಡ್ತಿದ್ದ ಕೆಲಸವೇನು ಗೊತ್ತಾ? ಕೆಲಸ ಕಳೆದುಕೊಂಡ ನಂತ್ರ ಪತಿ ಲೈಂಗಿಕ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದ. ಕಚೇರಿಯ ಕ್ಯಾಂಟಿನ್ ನಲ್ಲಿ ಇಬ್ಬರು ಮೊದಲು ಭೇಟಿಯಾಗಿದ್ದರು. ಮೊದಲ ಬಾರಿಯೇ ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ ಎರಡು ವರ್ಷದ ನಂತ್ರ 2009ರಲ್ಲಿ ಮದುವೆಯಾಗಿದ್ದರು.

ಬೆಂಗಳೂರಿನ ಸುಬ್ರಹ್ಮಣ್ಯನಗರದಲ್ಲಿ ಮನೆ ಮಾಡಿದ್ದರು. ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ 27 ವರ್ಷದ ಪತಿ ಕೆಲಸ ಕಳೆದುಕೊಂಡಿದ್ದ. ನಂತ್ರ ಅನೇಕ ಕಡೆ ಕೆಲಸ ಹುಡುಕಲು ಶುರು ಮಾಡಿದ್ದ. ಕೆಲ ತಿಂಗಳ ನಂತ್ರ ಪತಿ ಅನುಮಾನಾಸ್ಪದವಾಗಿ ನಡೆದುಕೊಳ್ಳುವುದನ್ನು ಪತ್ನಿ ಗಮನಿಸಿದ್ದಾಳೆ. ಪತಿ ಸದಾ ಲ್ಯಾಪ್ ಟಾಪ್, ಮೊಬೈಲ್ ನಲ್ಲಿ ಇರ್ತಿದ್ದ ಪತಿ, ಪತ್ನಿಗೆ ಹೇಳದೆ ಓಡಾಡುತ್ತಿದ್ದ ಎನ್ನಲಾಗಿದೆ.

ಅನುಮಾನಗೊಂಡ ಪತ್ನಿ ಸಹೋದರನ ಸಹಾಯದಿಂದ ಪತಿ ಲ್ಯಾಪ್ ಟಾಪ್ ಸರ್ಚ್ ಮಾಡಿದ್ದಾಳೆ. ಲ್ಯಾಪ್ ಟಾಪ್ ನಲ್ಲಿ ಪತಿಯ ನಗ್ನ ಫೋಟೋ ಇರುವ ಫೋಲ್ಡರ್ ಸಿಕ್ಕಿದೆ. ಅಲ್ಲಿ ಅರೆ ನಗ್ನ ಅವಸ್ಥೆಯಲ್ಲಿದ್ದ ಅಪರಿಚಿತ ಹುಡುಗಿ ಜೊತೆ ಪತಿಯ ಸೆಲ್ಫಿಗಳಿವೆ. ಬೆಂಳೂರಿನಲ್ಲಿ ಅನೇಕ ಗ್ರಾಹಕರನ್ನು ಹೊಂದಿರುವ ಪತಿ ಗಂಟೆಗೆ 3 ಸಾವಿರದಿಂದ 5 ಸಾವಿರದವರೆಗೆ ಚಾರ್ಜ್ ಮಾಡ್ತಾನೆ ಎಂಬುದು ಆಕೆಗೆ ಗೊತ್ತಾಗಿದೆ. ಅನೇಕ ಸ್ನೇಹಿತರನ್ನು ವಿಚಾರಿಸಿದ ಪತ್ನಿ, ಮಲ್ಲೇಶ್ವರಂ ಮಹಿಳಾ ಸಹಾಯವಾಣಿಗೆ ಕರೆ ಕೂಡ ಮಾಡಿದ್ದಳು. ಇದೇ ವೇಳೆ ಪತಿ ತನ್ನ ಹೊಸ ಕೆಲಸದಲ್ಲಿ ಪ್ರೀತಿ, ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...