alex Certify ‘ಏಷ್ಯಾಕಪ್ ಟೂರ್ನಿ’ಗೆ ಭಾರತ ಮಹಿಳಾ ತಂಡ ಪ್ರಕಟಿಸಿದ ‘BCCI’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಏಷ್ಯಾಕಪ್ ಟೂರ್ನಿ’ಗೆ ಭಾರತ ಮಹಿಳಾ ತಂಡ ಪ್ರಕಟಿಸಿದ ‘BCCI’

ಹಾಂಕಾಂಗ್ ನಲ್ಲಿ ಜೂನ್ 12ರಿಂದ ಆರಂಭವಾಗಲಿರುವ ಎಸಿಸಿ ಮಹಿಳಾ ಏಷ್ಯಾಕಪ್ನಲ್ಲಿ (Asia Cup) ಬ್ಯಾಟಿಂಗ್ ಆಲ್ರೌಂಡರ್ ಶ್ವೇತಾ ಶೆಹ್ರಾವತ್ ನಾಯಕತ್ವದ 14 ಸದಸ್ಯರ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದೆ.

ಭಾರತ ‘ಎ’ ತಂಡ ಜೂನ್ 13ರಂದು ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್ನಲ್ಲಿ ಆತಿಥೇಯ ಹಾಂಕಾಂಗ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. “ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಮುಂಬರುವ ಎಸಿಸಿ ಉದಯೋನ್ಮುಖ ಮಹಿಳಾ ಏಷ್ಯಾ ಕಪ್ 2023 ಗಾಗಿ ಭಾರತ ‘ಎ’ (ಉದಯೋನ್ಮುಖ) ತಂಡವನ್ನು ಶುಕ್ರವಾರ ಪ್ರಕಟಿಸಿದೆ ಎಂದು ಬಿಸಿಸಿಐ (BCCI) ಪ್ರಕಟಣೆಯಲ್ಲಿ ತಿಳಿಸಿದೆ.

ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಲಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಭಾರತ ‘ಎ’ (ಉದಯೋನ್ಮುಖ) ತಂಡವು ಆತಿಥೇಯ ಹಾಂಕಾಂಗ್, ಥೈಲ್ಯಾಂಡ್ ‘ಎ’ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ ‘ಎ’, ಶ್ರೀಲಂಕಾ ‘ಎ’, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ‘ಬಿ’ ಗುಂಪಿನಲ್ಲಿವೆ. ಫೈನಲ್ ಪಂದ್ಯ ಜೂನ್ 21ರಂದು ನಡೆಯಲಿದೆ.

ಭಾರತ ‘ಎ’ (ಉದಯೋನ್ಮುಖ) ತಂಡ: ಶ್ವೇತಾ ಶೆಹ್ರಾವತ್ (ನಾಯಕಿ), ಸೌಮ್ಯ ತಿವಾರಿ (ಉಪನಾಯಕಿ), ತ್ರಿಶಾ ಗೊಂಗಾಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಮಮತಾ ಮಡಿವಾಳ (ವಿಕೆಟ್ ಕೀಪರ್), ತಿತಾಸ್ ಸಾಧು, ಯಶಸ್ವಿ ಎಸ್, ಕಾಶ್ವೀ ಗೌತಮ್, ಪಾರ್ಶವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...