alex Certify ಕಟ್ಟಡ ನಿರ್ಮಾಣಕ್ಕೂ ಸಹಕಾರಿಯಾಯ್ತು ಬಜಾಜ್​ ಸ್ಕೂಟರ್; ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಡ ನಿರ್ಮಾಣಕ್ಕೂ ಸಹಕಾರಿಯಾಯ್ತು ಬಜಾಜ್​ ಸ್ಕೂಟರ್; ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು ​

ಕಟ್ಟಡ ಕಾರ್ಮಿಕರು ಹಳೆಯ ಬಜಾಜ್ ಸ್ಕೂಟರ್ ಅನ್ನು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಅನುಕೂಲ ಆಗುವ ವಿದ್ಯುತ್​ಚಾಲಿತ ರಾಟೆಯನ್ನಾಗಿ ಬಳಸಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋವನ್ನು ಪಂಕಜ್ ಪರೇಖ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ರಸ್ತೆಗಳಲ್ಲಿ ಓಡಿಸುವುದನ್ನು ಬಿಟ್ಟು ಈ ಸ್ಕೂಟರ್ ಅನ್ನು ಹೀಗೂ ಬಳಸಬಹುದೆಂದು ಬಜಾಜ್ ಕೂಡ ಊಹಿಸಿರಲಿಲ್ಲ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

ಅವಶ್ಯಕತೆಯು ನಾವೀನ್ಯತೆಯ ತಾಯಿಯಾಗಿದೆ. ಜನರು ಜೀವನವನ್ನು ಸುಲಭಗೊಳಿಸಲು ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಮೂಲಕ ಈ ಗಾದೆಮಾತನ್ನು ಸಾಬೀತು ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಅವರು ಹೇಳಿದ್ದಾರೆ. ವಿಡಿಯೋದಲ್ಲಿ ಬಜಾಜ್​ ಸ್ಕೂಟರ್​ಗೆ ಹಗ್ಗವನ್ನು ಕಟ್ಟಿ ಅದನ್ನು ರಾಟೆಯ ರೂಪದಲ್ಲಿ ಬಳಕೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಕಟ್ಟಡದ ಮೇಲ್ಭಾಗಕ್ಕೆ ಸಾಮಗ್ರಿಗಳನ್ನು ಕೊಂಡೊಯ್ಯಲು ಬಜಾಜ್​ ಸ್ಕೂಟರ್​ ಹೀಗೂ ನೆರವಾಗಬಲ್ಲುದು ಎಂಬುದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...