alex Certify ವಿಶ್ವಕಪ್​ ಫೈನಲ್​ನಿಂದ ಹೊರ ಬಿದ್ದ ಪಾಕಿಸ್ತಾನ; ಟ್ವಿಟರ್​ನಲ್ಲಿ ಮುಗಿಲುಮುಟ್ಟಿದ ಭಾರತೀಯರ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಕಪ್​ ಫೈನಲ್​ನಿಂದ ಹೊರ ಬಿದ್ದ ಪಾಕಿಸ್ತಾನ; ಟ್ವಿಟರ್​ನಲ್ಲಿ ಮುಗಿಲುಮುಟ್ಟಿದ ಭಾರತೀಯರ ಸಂಭ್ರಮ

ಐಸಿಸಿ ಟಿ 20 ವರ್ಲ್ಡ್​ ಕಪ್​ನಲ್ಲಿ ಗೆಲುವಿನ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಪಾಕಿಸ್ತಾನದ ಗೆಲುವಿನ ನಾಗಾಲೋಟಕ್ಕೆ ಆಸ್ಟ್ರೇಲಿಯಾ ಬ್ರೇಕ್​ ಹಾಕಿದೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ಗೆಲುವಿನ ನಗೆ ಬೀರುವ ಮೂಲಕ ಫೈನಲ್​​ಗೆ ಪಾಕಿಸ್ತಾನದ ಪ್ರವೇಶವನ್ನು ನಿರ್ಬಂಧಿಸಿದೆ. ಈ ಮೂಲಕ ಪಾಕಿಸ್ತಾನದ ಐಸಿಸಿ ಟಿ 20 ವರ್ಲ್ಡ್​ ಕಪ್​ ಗೆಲುವಿನ ಕನಸು ನುಚ್ಚು ನೂರಾಗಿದೆ.

ಆಸ್ಟ್ರೇಲಿಯಾದ ಈ ಗೆಲುವು ಆಸ್ಟ್ರೇಲಿಯಾ ತಂಡದ ಅಭಿಮಾನಿಗಳಿಗೆ ಎಷ್ಟು ಖುಷಿ ತಂದಿತೋ ಇಲ್ಲವೋ ತಿಳಿಯದು. ಆದರೆ ಪಾಕ್​ನ ಸೋಲನ್ನು ಕಂಡ ಟೀಂ ಇಂಡಿಯಾ ಅಭಿಮಾನಿಗಳು ಮಾತ್ರ ಸಖತ್​ ಖುಷಿಯಲ್ಲಿ ಇದ್ದಾರೆ.

ಪಂದ್ಯದ ನಿರ್ಣಯ ಹೊರಬೀಳುತ್ತಿದ್ದಂತೆಯೇ ಟ್ವಿಟರ್​ನಲ್ಲಿ ‘ಮೌಕಾ ಮೌಕಾ’ ಟ್ರೆಂಡಿಂಗ್​ನಲ್ಲಿದೆ. ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಭಾರತೀಯರು ಟ್ರೋಲ್​ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಐಸಿಸಿ ಟಿ 20 ವರ್ಲ್ಡ್​ ಕಪ್​ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಐದು ವಿಕೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.  ಫೈನಲ್​​ಗೆ ಪ್ರವೇಶ ಪಡೆದಿರುವ ಆಸ್ಟ್ರೇಲಿಯಾ ನ್ಯೂಜಿಲೆಂಡ್​ ವಿರುದ್ಧ ಸೆಣೆಸಲಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಎರಡನೇ ಬಾರಿಗೆ ಫೈನಲ್​​ಗೆ ಲಗ್ಗೆ ಇಟ್ಟಂತಾಗಿದೆ.

— Shivam Pratap Singh (@Shivampratap018) November 11, 2021

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...