alex Certify ಆಂಧ್ರಪ್ರದೇಶದಲ್ಲಿ ಪ್ರತಿ 7ರಲ್ಲಿ ಒಬ್ಬರಿಗೆ ಕೊರೊನಾ ಲಸಿಕೆ: ಅಧಿಕಾರಿಗಳಿಂದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಧ್ರಪ್ರದೇಶದಲ್ಲಿ ಪ್ರತಿ 7ರಲ್ಲಿ ಒಬ್ಬರಿಗೆ ಕೊರೊನಾ ಲಸಿಕೆ: ಅಧಿಕಾರಿಗಳಿಂದ ಮಾಹಿತಿ


ಜನವರಿ 16ರಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನವನ್ನ ಮುಂದುವರಿಸಿರುವ ಆಂಧ್ರ ಪ್ರದೇಶ ಸರ್ಕಾರ ಇಲ್ಲಿಯವರೆಗೆ ಆಂಧ್ರದ 1.04 ಕೋಟಿ ಮಂದಿಗೆ ಕೊರೊನಾ ಲಸಿಕೆಯನ್ನ ನೀಡಲಾಗಿದೆ . ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 74.92 ಲಕ್ಷ ಮಂದಿ ಲಸಿಕೆಯ ಮೊದಲ ಡೋಸ್ ಹಾಗೂ 25.24 ಲಕ್ಷ ಮಂದಿ ಕೊರೊನಾ ಎರಡನೆ ಡೋಸ್​ ಲಸಿಕೆ ಪಡೆದಿದ್ದಾರೆ.

ಕೇಂದ್ರದಿಂದ 98 ಲಕ್ಷ ಡೋಸ್​ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್​ ಲಸಿಕೆಗಳನ್ನ ಆಂಧ್ರ ಪ್ರದೇಶ ಪಡೆದಿತ್ತು. ಇದಾದ ಬಳಿಕ ಕೆಲ ಪ್ರಮಾಣದ ಲಸಿಕೆಗಳನ್ನ ರಾಜ್ಯದ ಜನತೆಗೆ ಹೇಗೋ ಹೊಂದಿಸಿ ನೀಡಿದೆ. ಗುಜರಾತ್​ ಹಾಗೂ ಮಹಾರಾಷ್ಟ್ರದಂತಹ ರಾಜ್ಯಗಳು ಜನಸಂಖ್ಯೆಯ 25 ಪ್ರತಿಶತದಷ್ಟು ಲಸಿಕೆಯನ್ನ ಪಡೆದಿದ್ದರೆ ಆಂಧ್ರ ಪ್ರದೇಶ ಮಾತ್ರ ಕೇವಲ 18 ಪ್ರತಿಶತ ಡೋಸ್​ಗಳನ್ನ ಪಡೆದಿತ್ತು.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ, 45 ವರ್ಷ ಮೇಲ್ಪಟ್ಟವರು ಹಾಗೂ 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲು ಆಂಧ್ರ ಪ್ರದೇಶದಲ್ಲಿ ಸಾಲುವಷ್ಟು ಲಸಿಕೆಗಳು ಬಾಕಿ ಉಳಿದಿಲ್ಲ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆಯ ವೇಗವನ್ನ ಹೆಚ್ಚಿಸಬೇಕು ಅನ್ನೋದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಆಂಧ್ರ ಪ್ರದೇಶ ಸಿಎಂ ಜಗನ್​ಮೋಹನ್​ ರೆಡ್ಡಿ ಈಗಾಗಲೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಕೊರೊನಾ ಲಸಿಕೆ, ಮೆಡಿಕಲ್​ ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಸೌಲಭ್ಯಗಳ ಅಭಾವದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಆಂಧ್ರ ಪ್ರದೇಶ ಕೋವಿಡ್​ ಸಹಾಯ ಹಸ್ತದ ನೋಡಲ್​ ಅಧಿಕಾರಿ ಡಾ. ಅರ್ಜಾ ಶ್ರೀಕಾಂತ್​ ಲಸಿಕೆ ಪೂರೈಕೆ ವಿಚಾರವಾಗಿ ಮಾತನಾಡಿದ್ದು, ರಾಜ್ಯದಲ್ಲಿ ನಾವು 1 ಕೋಟಿಗೂ ಅಧಿಕ ಮಂದಿಗೆ ಕೊರೊನಾ ಲಸಿಕೆಯನ್ನ ಪೂರೈಸಿದ್ದೇವೆ. ರಾಜ್ಯದಲ್ಲಿ ಪ್ರತಿ 7 ಮಂದಿಯಲ್ಲಿ ಒಬ್ಬರು ಲಸಿಕೆಯನ್ನ ಪಡೆದಿದ್ದಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...