alex Certify ಶಾಪಿಂಗ್ ಗೆ ರೆಡಿಯಾಗಿ….! ಈ ದಿನ ಶುರುವಾಗಲಿದೆ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪಿಂಗ್ ಗೆ ರೆಡಿಯಾಗಿ….! ಈ ದಿನ ಶುರುವಾಗಲಿದೆ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’

Amazon Great Indian Festival Sale 2021 Announced, Beginning October 4 as  Month-Long Event | Technology News

ಅಮೆಜಾನ್ ಇಂಡಿಯಾ, ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಇಂಡಿಯಾ, ಗ್ರೇಟ್ ಇಂಡಿಯನ್ ಸೇಲ್ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 4ರಿಂದ ಗ್ರೇಟ್ ಇಂಡಿಯಾ ಸೇಲ್ ಶುರುವಾಗಲಿದೆ. ಹಿಂದಿನ ವರ್ಷದಂತೆ ಈ ವರ್ಷವೂ ಒಂದು ತಿಂಗಳ ಪೂರ್ತಿ ಸೇಲ್ ನಡೆಯಲಿದೆ.

ಅಮೆಜಾನ್ ಇಂಡಿಯಾದ ಪ್ರೈಂ ಗ್ರಾಹಕರಿಗೆ ಒಂದು ದಿನ ಮೊದಲೇ ಸೇಲ್ ಲಾಭ ಸಿಗಲಿದೆ. ಇಷ್ಟೇ ಅಲ್ಲದೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಮತ್ತು ವಿಸ್ತೃತ ನೋ-ಕಾಸ್ಟ್ ಇಎಂಐ ಪ್ರಯೋಜನ ಸಿಗಲಿದೆ.

ಈ ಸೇಲ್ ನಲ್ಲಿ ಅಮೆಜಾನ್, ಗ್ರಾಹಕರಿಗೆ ಕೊಡುಗೆಗಳು, ಬೃಹತ್ ರಿಯಾಯಿತಿಗಳು, ಹಬ್ಬದ ಕೊಡುಗೆಗಳನ್ನು ನೀಡಲಿದೆ. ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಲ್ಲಿ ಸ್ಯಾಮ್‌ಸಂಗ್, ಒನ್‌ಪ್ಲಸ್, ಶಿಯೋಮಿ, ಸೋನಿ, ಆಪಲ್, ಲೆನೊವೊ, ಎಚ್‌ಪಿ, ಆಸುಸ್, ಫಾಸಿಲ್, ಲೆವಿಸ್, ಬಿಬಾ, ಅಡಿಡಾಸ್, ಅಮೆರಿಕನ್ ಟೂರಿಸ್ಟರ್, ಪ್ರೆಸ್ಟೀಜ್ ಸೇರಿದಂತೆ ಅನೇಕ ಕಂಪನಿಗಳು ಆಫರ್ ನೀಡಲಿವೆ.

ಇದಲ್ಲದೆ ಟಾಪ್ ಬ್ರಾಂಡ್ ಗಳ 1000ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಯಾಗಲಿವೆ. ಅಮೆಜಾನ್ ಗ್ರಾಹಕರು ತಮ್ಮ ಭಾಷೆಯಲ್ಲಿ ಶಾಪಿಂಗ್ ಮಾಡಬಹುದು. ಗ್ರಾಹಕರು ಶಾಪಿಂಗ್‌ಗಾಗಿ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್‌ನ ಸಹಾಯವನ್ನು ಪಡೆಯಬಹುದು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬಂಗಾಳಿ ಮತ್ತು ಮರಾಠಿಯಲ್ಲಿ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...