alex Certify ಅನುತ್ಪಾದಕ ಆಸ್ತಿ ತಗ್ಗಿದರೂ ಕೆಟ್ಟ ಸಾಲದ ಪ್ರಮಾಣ ಹೆಚ್ಚಳಕ್ಕೆ ಕಾರಣವಾದ ಎಂಎಸ್‌ಎಂಇ, ಕೃಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುತ್ಪಾದಕ ಆಸ್ತಿ ತಗ್ಗಿದರೂ ಕೆಟ್ಟ ಸಾಲದ ಪ್ರಮಾಣ ಹೆಚ್ಚಳಕ್ಕೆ ಕಾರಣವಾದ ಎಂಎಸ್‌ಎಂಇ, ಕೃಷಿ

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅನುತ್ಪಾದಕ ಆಸ್ತಿಯ ಮೌಲ್ಯವನ್ನು ತಗ್ಗಿಸಲು ಬ್ಯಾಂಕಿಂಗ್ ಕ್ಷೇತ್ರ ಸಫಲವಾದರೂ ಸಹ, ಕೃಷಿ ಮತ್ತು ಎಂಎಸ್‌ಎಂಇ ಕ್ಷೇತ್ರಗಳಲ್ಲಿ ಕೆಟ್ಟ ಸಾಲದ ಪ್ರಮಾಣ ಏರಿಕೆಯಾಗಿರುವುದು ಕಂಡು ಬಂದಿದೆ.

ಕೃಷಿ ಕ್ಷೇತ್ರದ ಕೆಟ್ಟ ಸಾಲದಲ್ಲಿ 9,355 ಕೋಟಿ ರೂ.ಗಳ ಏರಿಕೆಯಾಗಿ, ಈ ವಿತ್ತೀಯ ವರ್ಷದಲ್ಲಿ ಒಟ್ಟಾರೆ 1,36,019 ಕೋಟಿ ರೂ.ಗಳಿಗೆ ಹೆಚ್ಚಿದೆ. ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿಯ 17.4% ಭಾಗ ಕೃಷಿ ಕ್ಷೇತ್ರದ್ದಾಗಿದೆ. ಕಳೆದ ವರ್ಷದ ಇದೇ ಪಾಲು 15.07% ಇತ್ತು.

ಐಸ್ ಕ್ರೀಂ ತಿಂದ ಬೆಕ್ಕಿನ ವಿಡಿಯೋ ವೈರಲ್…!

ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ 1,15,281 ಕೋಟಿ ರೂ.ಗಳ ಸಾಲ ವಿತರಿಸಿದೆ. ಕಳೆದ ವಿತ್ತೀಯ ವರ್ಷದಲ್ಲಿ 1,11,571 ಕೋಟಿ ರೂ.ಗಳನ್ನು ಬ್ಯಾಂಕುಗಳು ಕೃಷಿ ಕ್ಷೇತ್ರಕ್ಕೆ ಸಾಲದ ರೂಪದಲ್ಲಿ ನೀಡಿದ್ದವು. ವಿತ್ತೀಯ ವರ್ಷ 21ರಂತೆ ಕೃಷಿ ಕ್ಷೇತ್ರಕ್ಕೆ ಕೊಟ್ಟಿದ್ದ ಒಟ್ಟಾರೆ ಸಾಲದ ಮೊತ್ತವು 13.84 ಲಕ್ಷ ಕೋಟಿ ರೂ.ಗಳಾಗಿ ಬೆಳೆದಿತ್ತು.

ಕಳೆದ ವರ್ಷದ ಅವಧಿಯಲ್ಲಿ ಎಂಎಸ್‌ಎಂಇ ಕ್ಷೇತ್ರಕ್ಕೆ 1,28,502 ಕೋಟಿ ರೂ.ಗಳ ಅನುತ್ಪಾದಕ ಸಾಲವನ್ನು ಬ್ಯಾಂಕುಗಳು ಕೊಟ್ಟಿವೆ. 2020ರ ವಿತ್ತೀಯ ವರ್ಷದಲ್ಲಿ ಎಂಎಸ್‌ಎಂಇಗಳಿಂದಾಗಿ 1,08,704 ಕೋಟಿ ರೂ.ಗಳಷ್ಟು ಅನುತ್ಪಾದಕ ಆಸ್ತಿ ಬೆಳೆದಿತ್ತು.

ಕೋವಿಡ್ ಸಾಂಕ್ರಮಿಕದ ನಡುವೆ ಇಎಲ್‌ಜಿಎಸ್‌ ಯೋಜನೆ ಮೂಲಕ, 2020ರ ಮೇನಲ್ಲಿ ಎಂಎಸ್‌ಎಂಇ ಕ್ಷೇತ್ರಕ್ಕೆ ಸರ್ಕಾರವು ವಿಶೇಷ ಉತ್ತೇಜನ ನೀಡಲು ಮುಂದಾದರೂ ಸಹ ಈ ಕ್ಷೇತ್ರದಿಂದ ಅನುತ್ಪಾದಕ ಆಸ್ತಿಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಯೋಜನೆಯಿಂದಾಗಿ 13.5 ಲಕ್ಷ ಎಂಎಸ್‌ಎಂಇಗಳಿಗೆ ಇದೇ ಅವಧಿಯಲ್ಲಿ ಪುನಶ್ಚೇತನ ನೀಡಲಾಗಿದ್ದು, ತನ್ಮೂಲಕ ಈ ಕ್ಷೇತ್ರದಿಂದ ಹೆಚ್ಚುವರಿಯಾಗಿ 1.8 ಲಕ್ಷ ಕೋಟಿ ರೂ.ಗಳ ಅನುತ್ಪಾದಕ ಆಸ್ತಿ ಸೃಷ್ಟಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌‌ನ ಸಂಶೋಧನಾ ವರದಿಯೊಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...