alex Certify ʼಬಚ್​ಪನ್​ ಕಾ ಪ್ಯಾರ್ʼ ಬಳಿಕ ಇದೀಗ ಮತ್ತೊಂದು ಪ್ರತಿಭೆಗೆ ಅವಕಾಶ ನೀಡಲು ಮುಂದಾದ ಬಾದ್​ ಶಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಚ್​ಪನ್​ ಕಾ ಪ್ಯಾರ್ʼ ಬಳಿಕ ಇದೀಗ ಮತ್ತೊಂದು ಪ್ರತಿಭೆಗೆ ಅವಕಾಶ ನೀಡಲು ಮುಂದಾದ ಬಾದ್​ ಶಾ..!

ಬಚ್​ಪನ್ ಕಾ ಪ್ಯಾರ್​​ ಹಾಡಿನ ಮೂಲಕ ಫೇಮಸ್​ ಆಗಿದ್ದ ಬಾಲಕನ ಜೊತೆ ಸೇರಿ ಆಲ್ಬಂ ನಿರ್ಮಿಸಿದ್ದ ಬಾಲಿವುಡ್​ ರ್ಯಾಪರ್​ ಬಾದ್​ಶಾ ಇದೀಗ ಡ್ಯಾನ್ಸ್​​ ಪ್ಲಸ್​​ ಸೀಸನ್​ 6ರ ಸ್ಪರ್ಧಿಗೆ ತನ್ನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲು ತಮ್ಮ ಮುಂದಿನ ಹಾಡಿನಲ್ಲಿ ಅವಕಾಶ ನೀಡೋದಾಗಿ ಪ್ರಾಮಿಸ್​ ಮಾಡಿದ್ದಾರೆ.

ಡ್ಯಾನ್ಸ್​ ಪ್ಲಸ್​​ನ ಎಪಿಸೋಡ್​ನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದ ಬಾದ್​ಶಾ ಕೊರಿಯೋಗ್ರಾಫರ್​ ಪುನೀತ್​ ಜೆ ಪಾಠಕ್​​ ತಂಡದ ಸ್ಪರ್ಧಿ ರೋಮ್​ಶಾ ಸಿಂಗ್ ​​ಗೆ ಈ ಭರವಸೆ ನೀಡಿದ್ದಾರೆ.

ರೋಮ್​ಶಾರ ನೃತ್ಯ ಪ್ರದರ್ಶನಕ್ಕೆ ಮಾರು ಹೋದ ಬಾದ್​ಶಾ, ಇದು ನಿಜಕ್ಕೂ ಉಸಿರು ಬಿಗಿಹಿಡಿಯುವಂತಹ ಪ್ರದರ್ಶನವಾಗಿದೆ. ನೀವು ಈಕೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಜನಸಂದಣಿಯಲ್ಲೂ ಎದ್ದು ಕಾಣುವ ಪ್ರತಿಭೆ ನೀವು. ಇಂತಹ ಒಳ್ಳೆಯ ಕಲಾವಿದೆಯೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ರು.

ನೃತ್ಯ ಪ್ರದರ್ಶನದ ಬಳಿಕ ಮಾತನಾಡಿದ ರೋಮ್ಶಾ ಮುಂದಿನ ದಿನಗಳಲ್ಲಿ ನಿಮ್ಮ ಆಲ್ಬಂನಲ್ಲಿ ನಟಿಸುವ ಆಸೆ ಹೊಂದಿದ್ದೇನೆ ಎಂದು ಬಾದ್‌ ಶಾ ಬಳಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಬಾದ್‌ ಶಾ ಖಂಡಿತವಾಗಿಯೂ ನಿಮ್ಮ ಕನಸನ್ನು ನನಸು ಮಾಡುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...