alex Certify ಪತ್ನಿ ತನಗಿಂತ ಎತ್ತರವಿದ್ದರೂ ಹೀಲ್ಸ್‌ ಧರಿಸಲು ಹೇಳುತ್ತಾನೆ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ತನಗಿಂತ ಎತ್ತರವಿದ್ದರೂ ಹೀಲ್ಸ್‌ ಧರಿಸಲು ಹೇಳುತ್ತಾನೆ ಪತಿ….!

ಮಾಸ್ಕೋ: ಕೆಲವರು ಗಂಡ-ಹೆಂಡತಿ ಒಂದೇ ಎತ್ತರ ಇದ್ದರೆ, ಅಯ್ಯೋ ನೀನು ಹೀಲ್ಸ್ ಚಪ್ಪಲಿ ಧರಿಸಿ ನನ್ನ ಜತೆ ಬರಬೇಡ ಅಂತಾ ತನ್ನ ಪತ್ನಿಗೆ ಬೈಯುತ್ತಾರೆ. ಅದೆಷ್ಟೋ ಗಂಡಂದಿರು ಹೆಂಡತಿ ಹೀಲ್ಸ್ ಧರಿಸಿದರೆ ಇಷ್ಟಪಡುವುದಿಲ್ಲ. ಆದರೆ ಇಲ್ಲೊಬ್ಬಾತನ ಪತ್ನಿಯು ತನಗಿಂತ 5 ಇಂಚು ಎತ್ತರವಾಗಿದ್ದರೂ ಕೂಡ ಎತ್ತರವಾದ ಚಪ್ಪಲಿ (ಹೀಲ್ಸ್) ಧರಿಸುವುದು ಆಕೆಯ ಪತಿಗೆ ಇಷ್ಟವಂತೆ.

ಹೌದು, ಮಾಡೆಲ್ ಆಗಿರುವ ಅನಸ್ತಾಸಿಯಾ ಪಾರ್ಶೆಂಟ್ಸೆವಾ 6.5 ಅಡಿ ಎತ್ತರವಿದ್ದು, ಕಜಕಿಸ್ತಾನದ ಅತಿ ಎತ್ತರದ ಮಹಿಳೆ ಎಂಬ ಬಿರುದು ಹೊಂದಿದ್ದಾಳೆ. ಸದ್ಯ ರಷ್ಯಾದಲ್ಲಿ ವಾಸಿಸುತ್ತಿದ್ದಾಳೆ. ಈಕೆ ಆರು ಅಡಿ ಎತ್ತರವಿರುವ ಸೆರ್ಗೆ ಪಾರ್ಶೆಂಟ್ಸೆವಾ ಜತೆ ಪ್ರೇಮಿಸಿ ವಿವಾಹವಾಗಿದ್ದಾಳೆ. ‘’ಮೊದಲಿಗೆ ಎತ್ತರದ ಬಗ್ಗೆ ಇಬ್ಬರಲ್ಲೂ ಸ್ವಲ್ಪ ಗೊಂದಲವಿತ್ತು. ಬಳಿಕ ನಾವದಕ್ಕೆ ಅಷ್ಟಾಗಿ ಗಮನ ಹರಿಸಲಿಲ್ಲ. ನಾವು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಪ್ರೀತಿಗೆ ಎತ್ತರ ಅಡ್ಡಿ ಬಂದಿಲ್ಲ’’ ಎಂದು ಅನಸ್ತಾಸಿಯಾ ಹೇಳಿದ್ದಾರೆ.

ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನ ಜೀವ ತೆಗೆದ ತಂದೆ

‘’ಅಲ್ಲದೆ ಜನರು ನಮ್ಮಿಬ್ಬರ ಎತ್ತರ ವ್ಯತ್ಯಾಸದಿಂದಾಗಿ ದುರುಗುಟ್ಚಿ ನೋಡುತ್ತಾರೆ ಹಾಗೂ ಎತ್ತರ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಬಹುದು. ಆದರೆ ಅದ್ಯಾವುದಕ್ಕೂ ನಾವು ತಲೆಕೆಡಿಸಿಕೊಳ್ಳಲ್ಲ’’ ಎಂದು ಹೇಳಿದ್ದಾರೆ. ‘’ಅಲ್ಲದೆ ತನ್ನ ಪತಿ ನಾವೆಲ್ಲೇ ಹೋದರೂ ನಾನು ಹೀಲ್ಸ್ ಚಪ್ಪಲಿ ಧರಿಸುವುದನ್ನು ಇಷ್ಟಪಡುತ್ತಾನೆ. ಅಲ್ಲದೆ ನನ್ನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾನೆ’’ ಎಂದು ಹೇಳಿದ್ದಾರೆ.

ಆದರೆ ಈಕೆಯ ಶಾಲಾ ದಿನಗಳು ಮಾತ್ರ ಭಾರಿ ಕಠಿಣವಾಗಿತ್ತು. ಎಲ್ಲರೂ ಈಕೆಯನ್ನು ಆಸ್ಟ್ರಿಚ್, ಜಿರಾಫೆ ಅಂತಾ ಕರೆದು ಹಿಯಾಳಿಸುತ್ತಿದ್ದರಂತೆ. ಈಕೆಗೆ ದುಃಖವಾದರೂ ಕೂಡ ಕುಗ್ಗದ ಅನಸ್ಸಾಸಿಯಾ ಯಾವತ್ತೂ ತಲೆತಗ್ಗಿಸಿ ನಡೆಯುತ್ತಿರಲಿಲ್ಲವಂತೆ. ಜನರು ಏನೆಂದರೂ ಅದರತ್ತ ಗಮನಹರಿಸುತ್ತಿರಲಿಲ್ಲ ಎಂದು ಹೇಳಿದ್ದಾಳೆ. ಕಜಕಿಸ್ತಾನದ ಅತ್ಯಂತ ಎತ್ತರದ ಮಹಿಳೆ ಎಂಬ ಬಿರುದು ಬರುತ್ತಲೇ ಈಕೆಗೆ ಹೆಚ್ಚಿನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರಂತೆ. ಹೀಗಾಗಿ ಮತ್ತಷ್ಟು ಆತ್ಮಸ್ಥೈರ್ಯ ಹೆಚ್ಚಾಗಲು ಕಾರಣವಾಯಿತು ಎಂದು ತಿಳಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...