alex Certify 2001ರಲ್ಲಿ ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಬಿರಿಯಾನಿ ಬೆಲೆ ನೋಡಿ ಶಾಕ್‌ ಆಗಿದ್ದಾರೆ ನೆಟ್ಟಿಗರು, ವೈರಲ್‌ ಆಗಿದೆ ಹಳೆಯ ಮೆನು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2001ರಲ್ಲಿ ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಬಿರಿಯಾನಿ ಬೆಲೆ ನೋಡಿ ಶಾಕ್‌ ಆಗಿದ್ದಾರೆ ನೆಟ್ಟಿಗರು, ವೈರಲ್‌ ಆಗಿದೆ ಹಳೆಯ ಮೆನು….!

ಜಗತ್ತಿನಲ್ಲಿ ಆಹಾರ ಪ್ರಿಯರಿಗೆ ಕೊರತೆಯಿಲ್ಲ. ಆಹಾರ ಪದಾರ್ಥಗಳ ಬೆಲೆಗಳು ವೇಗವಾಗಿ ಹೆಚ್ಚುತ್ತಿವೆ, ಆದರೆ ಭೋಜನ ಪ್ರಿಯರ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಮೆನು ಕಾರ್ಡ್‌ನಲ್ಲಿರೋ ವೆರೈಟಿ ತಿನಿಸುಗಳು, ಅವುಗಳ ದರವನ್ನೆಲ್ಲ ನೋಡಿ ನಾವು ಆರ್ಡರ್‌ ಮಾಡುತ್ತೇವೆ. ಸುಮಾರು 22 ವರ್ಷಗಳ ಹಿಂದಿನ ಮೆನು ಕಾರ್ಡ್‌ ಒಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಾನ್ ವೆಜ್ ಪ್ರಿಯರಂತೂ ಈ ಮೆನುವಿನಲ್ಲಿರೋ ಆಹಾರ ಪದಾರ್ಥಗಳ ಬೆಲೆ ತಿಳಿದರೆ ಶಾಕ್‌ ಆಗೋದು ಗ್ಯಾರಂಟಿ.

ಈ ಮೆನು ಕಾರ್ಡ್ 2001 ರದ್ದು. ಆಗ ಒಂದು ಎಗ್ ರೋಲ್ 7 ರೂ., ಚಿಕನ್ ರೋಲ್‌ಗೆ 10 ರೂ., ಕೇವಲ 30 ರೂ.ಗೆ ಚಿಕನ್ ಬಿರಿಯಾನಿ ಸವಿಯುತ್ತಿದ್ದಿರಿ. ಇದಲ್ಲದೇ ಚಿಕನ್ ಚಾಪ್ ಗೆ 25 ರೂ., ಚಿಕನ್ ಡೋಪಿಯಾಜಾಗೆ 30 ರೂ., ಚಿಕನ್ ಮುಸಲ್ಲಂಗೆ 85 ರೂ., ಚಿಕನ್ ಟಿಕ್ಕಾಗೆ 45 ರೂ. 2001ರಲ್ಲಿ ಮಟನ್ ಬಿರಿಯಾನಿ ಕೇವಲ  32 ರೂಪಾಯಿಗೆ ದೊರೆಯುತ್ತಿತ್ತು. ಈ ಬೆಲೆಯನ್ನು ನೋಡಿದ್ರೆ ಮೀನು ಪ್ರಿಯರೂ ಆಶ್ಚರ್ಯ ಪಡುತ್ತಾರೆ. ಏಕೆಂದರೆ ಆಗ 10 ರೂ.ಗೆ ಮೀನು ಫ್ರೈ, 16 ರೂ.ಗೆ ಫಿಶ್ ಫಿಂಗರ್, 25 ರೂ.ಗೆ ಮೀನು ತಂದೂರಿ ಇತ್ತು.

ರೊಟ್ಟಿಗಳ ಬಗ್ಗೆ ಮಾತನಾಡುವುದಾದರೆ, ರುಮಾಲಿ ರೊಟ್ಟಿಯ ಬೆಲೆ 1 ರೂಪಾಯಿ 25 ಪೈಸೆ. ಲಚ್ಚಾ ಪರಾಠ ಕೇವಲ 5 ರೂಪಾಯಿಗೆ  ಲಭ್ಯವಿತ್ತು. ಈಗಿನ ಬೆಲೆಗೆ ಇದನ್ನು ಹೋಲಿಸಿದ್ರೆ ಜನರು ಕಂಗಾಲಾಗಿ ಹೋಗ್ತಾರೆ. ಆಹಾರ ಮತ್ತು ಪಾನೀಯಗಳ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ. 2004ರಿಂದ 2013ರವರೆಗೆ ಆಹಾರ ಪದಾರ್ಥಗಳನ್ನು ಗಮನಿಸಿದರೆ 9 ವರ್ಷಗಳಲ್ಲಿ ಶೇ.157ರಷ್ಟು ದರ ಹೆಚ್ಚಳವಾಗಿದೆ.

ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ತರಕಾರಿ ಉತ್ಪಾದಕ ರಾಷ್ಟ್ರವಾಗಿದೆ. ಆದರೆ ಈ ಅವಧಿಯಲ್ಲಿ ತರಕಾರಿಗಳ ಬೆಲೆಯೂ ಶೇ.350ರಷ್ಟು ಹೆಚ್ಚಾಗಿದೆ. 2004 ಮತ್ತು 2013 ರ ನಡುವೆ, ಈರುಳ್ಳಿ ಬೆಲೆಯಲ್ಲಿಯೇ ಶೇಕಡಾ 521 ರಷ್ಟು ಏರಿಕೆ ಕಂಡುಬಂದಿದೆ. ಆಗಿನ ಕಾಲದಲ್ಲಿ ಈರುಳ್ಳಿ ಬೆಲೆ ಕೆಲವೇ ದಿನಗಳಲ್ಲಿ ದುಪ್ಪಟ್ಟು ಮೂರು ಪಟ್ಟು ಹೆಚ್ಚಾಗುತ್ತಿತ್ತು. 2010-11ರ ನಂತರ 2013ರಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿತ್ತು.

ಈ ವೈರಲ್‌ ಮೆನು ಕಾರ್ಡ್‌ ನೋಡಿ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿರೋದು ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದೆ.

https://www.instagram.com/p/CtEuto1pCWp/?utm_source=ig_embed&ig_rid=49f10d78-a5b8-4a1a-badd-b0c4566f6c7c

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...