alex Certify ಹೆಚ್ಚಾಗಿ ‘ಇಯರ್ ಫೋನ್’ ಬಳಸುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಾಗಿ ‘ಇಯರ್ ಫೋನ್’ ಬಳಸುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಿ

18 ವರ್ಷದ ಯುವಕನೊಬ್ಬ ಇಯರ್ ಫೋನ್ ನನ್ನು ದೀರ್ಘಸಮಯದ ತನಕ ಬಳಸಿದ ಹಿನ್ನೆಲೆ ತನ್ನ ಶ್ರವಣ ಸಾಮರ್ಥ್ಯವನ್ನು (hearing ability) ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.

ಇತ್ತೀಚೆಗೆ ಯುವಕ-ಯುವತಿಯರಿಗೆ ಇಯರ್ ಫೋನ್ (earphones) ಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿದೆ ಎನ್ನಬಹುದು. ಹೌದು, ವಿಶೇಷವಾಗಿ ನೀವು ಬಸ್ ಗಳಲ್ಲಿ ಪ್ರಯಾಣಿಸಬೇಕಿದ್ದರೆ, ದೀರ್ಘ ಸಮಯವನ್ನು ಕಳೆಯಬೇಕಿದ್ದರೆ, ನಿರಂತರವಾಗಿ ಗಂಟೆಗಳ ಕಾಲ ಹೆಡ್ ಫೋನ್ ಬಳಸುತ್ತೀರಿ.

ನೆನಪಿಡಿ ಇದರಿಂದ ನಿಮ್ಮ ಕಿವಿಗಳಿಗೆ ಡ್ಯಾಮೇಜ್ (damage) ಆಗುವ ಸಂಭವ ಹೆಚ್ಚಿದೆ. 18 ವರ್ಷದ ಯುವಕನೊಬ್ಬ ಇಯರ್ ಫೋನ್ ನನ್ನು ದೀರ್ಘಸಮಯದ (prolonged period) ತನಕ ಬಳಸಿದ ಹಿನ್ನೆಲೆ ಆತ ಕಿವುಡನಾಗಿದ್ದಾನೆ.

ಹೆಡ್ ಫೋನ್ ಬಳಸಿ ಆದರೆ ಕಿವಿಗೆ ಹಾನಿಯಾಗದಂತೆ ಈ ಕ್ರಮ ಅನುಸರಿಸಿ

1) ಇಯರ್ ಬಡ್ ಗಳು ಅಥವಾ ಹೆಡ್ ಫೋನ್ ಗಳನ್ನು ಕಡಿಮೆ ಸಮಯದಲ್ಲಿ ಬಳಸಲು ಪ್ರಯತ್ನಿಸಿ, ಹೆಚ್ಚಿನ ವಾಲ್ಯೂಮ್ ಕೊಡಬೇಡಿ.

2) ವಾಲ್ಯೂಮ್ ಅನ್ನು ಗರಿಷ್ಠ ಮಟ್ಟದ ಶೇಕಡಾ 60 ಕ್ಕಿಂತ ಹೆಚ್ಚಿರಬಾರದು ಎಂಬುದು ಸಾಮಾನ್ಯ ನಿಯಮವಾಗಿದೆ.

3) ಎ ಎನ್ ಸಿಯೊಂದಿಗೆ ಇಯರ್ ಬಡ್ ಗಳನ್ನು ಬಳಸಿ ಏಕೆಂದರೆ ಅವು ಬಾಹ್ಯ ಶಬ್ದವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಬಂಧಿಸಬಹುದು, ಇದು ಕಡಿಮೆ ವಾಲ್ಯೂಮ್ ಮಟ್ಟದಲ್ಲಿ ಕೇಳಲು ನಿಮಗೆ ಅನುವು ಮಾಡಿಕೊಡುತ್ತದೆ.

4) ಸೋಂಕುಗಳಿಗೆ ಕಾರಣವಾಗುವ ಕೊಳೆ ಅಥವಾ ಬೆವರು ಸಂಗ್ರಹವಾಗದಂತೆ ತಡೆಯಲು ನಿಮ್ಮ ಕಿವಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

5) ಇಯರ್ ಬಡ್ ಗಳ ಬದಲು ಓವರ್-ಇಯರ್ ಹೆಡ್ಫೋನ್ಗಳನ್ನು ಬಳಸಿ, ಏಕೆಂದರೆ ಅವು ಧ್ವನಿಯನ್ನು ಹೆಚ್ಚು ಸಮಾನವಾಗಿ ವಿತರಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...