
ಗ್ರೇಟರ್ ನೊಯ್ಡಾದಲ್ಲಿ ಸ್ವಂತ ಫ್ಲಾಟ್ ಇದ್ದರೂ ವೃದ್ಧ ದಂಪತಿ ಕಟ್ಟಡದ ಮೆಟ್ಟಿಲುಗಳ ಮೇಲೆ ವಾಸಿಸುತ್ತಿದ್ದಾರೆ. ಸುನಿಲ್ ಕುಮಾರ್ ಹಾಗೂ ರಾಖಿ ಗುಪ್ತಾ ದಂಪತಿ ಫ್ಲಾಟ್ ಅನ್ನು ವರ್ಷದ ಹಿಂದಷ್ಟೆ ಬಾಡಿಗೆಗೆ ಕೊಟ್ಟಿದ್ದರು. 35 ವರ್ಷದ ಮಹಿಳೆಯೊಬ್ಬಳು ತನ್ನ ಮಗನೊಂದಿಗೆ ಅಲ್ಲಿ ಬಾಡಿಗೆಗಿದ್ಲು. ಮುಂಬೈನಿಂದ ನೋಯ್ಡಾಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ ಸುನಿಲ್ ಹಾಗೂ ರೇಖಾ ದಂಪತಿ ತಮ್ಮ ಫ್ಲಾಟ್ ಖಾಲಿ ಮಾಡುವಂತೆ ಬಾಡಿಗೆಗಿದ್ದ ಮಹಿಳೆಗೆ ಸೂಚಿಸಿದ್ದಾರೆ.
ಆದ್ರೆ ಆಕೆ ಫ್ಲಾಟ್ ಖಾಲಿ ಮಾಡುತ್ತಿಲ್ಲ. ಈಗಾಗ್ಲೇ ಮುಂಬೈನಿಂದ ಬಂದಿಳಿದಿರೋ ದಂಪತಿ ಬೇರೆ ಜಾಗವಿಲ್ಲದೆ ನಾಲ್ಕು ದಿನಗಳಿಂದ ಮನೆಯ ಮೆಟ್ಟಿಲುಗಳ ಮೇಲೆ ಉಳಿದುಕೊಂಡಿದ್ದಾರೆ. ಗ್ರೇಟರ್ ನೋಯ್ಡಾ ವೆಸ್ಟ್‌ನ ಸೆಕ್ಟರ್ 16 ಬಿಯಲ್ಲಿರೋ ಶ್ರೀ ರಾಧಾ ಸ್ಕೈ ಗಾರ್ಡನ್ ಸೊಸೈಟಿಯಲ್ಲಿ ಈ ಫ್ಲಾಟ್ ಇದೆ.
ಕಳೆದ ಜುಲೈನಲ್ಲಿ ಬಾಡಿಗೆಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅಗ್ರಿಮೆಂಟ್ ಈಗಾಗಲೇ ಮುಗಿದಿದೆ. ಎಪ್ರಿಲ್ ತಿಂಗಳಿನಲ್ಲಿಯೇ ಈ ಬಗ್ಗೆ ಬಾಡಿಗೆಗಿದ್ದ ಮಹಿಳೆಗೆ ಸುನಿಲ್ ಕುಮಾರ್ ಮಾಹಿತಿ ನೀಡಿದ್ದರು. ಅಗ್ರಿಮೆಂಟ್ ಮುಗಿಯುತ್ತಿದ್ದಂತೆ ಮನೆ ಖಾಲಿ ಮಾಡಬೇಕೆಂದು ಸೂಚಿಸಿದ್ದರು. ಇದಕ್ಕೆ ಒಪ್ಪಿಕೊಂಡಿದ್ದ ಮಹಿಳೆ ಈಗ ಒಲ್ಲೆ ಎನ್ನುತ್ತಿದ್ದಾಳೆ.
ಕೆಲವು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ದಂಪತಿ ಈಗ ಮನೆಯ ಮೆಟ್ಟಿಲುಗಳಲ್ಲೇ ಬೀಡುಬಿಟ್ಟಿದ್ದಾರೆ. ಸೊಸೈಟಿಯ ನಿವಾಸಿಗಳು ತನ್ನ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸುತ್ತಿದ್ದಾರೆ, ಅವರು ಕ್ಷಮೆ ಕೇಳುವವರೆಗೂ ತಾನು ಮನೆ ಖಾಲಿ ಮಾಡುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದಿದ್ದಾಳೆ.
ಬಾಡಿಗೆಗೆ ಬೇರೆ ಮನೆ ಸಿಗುತ್ತಿಲ್ಲ ಅಂತಾನೂ ವಾದಿಸ್ತಿದ್ದಾಳೆ. ವೃದ್ಧ ದಂಪತಿ ಪೊಲೀಸರಿಗೂ ಮನವಿ ಮಾಡಿದ್ರು, ಆದ್ರೆ ಕೋರ್ಟ್ ಆದೇಶ ತಂದರೆ ಮಾತ್ರ ಬಾಡಿಗೆಗಿರುವ ಮಹಿಳೆಗೆ ಖಾಲಿ ಮಾಡುವಂತೆ ಸೂಚಿಸಬಹುದೆಂದು ಪೊಲೀಸರು ಹೇಳ್ತಿದ್ದಾರೆ.