alex Certify ಸ್ಟುಡಿಯೋದಲ್ಲಿ ಒಟ್ಟಿಗೆ ಕಾಣಿಸಿಕೊಂಡ 36ರ ವರ,‌ 82ರ ವಧು: ಪ್ರೀತಿ, ಸೆಕ್ಸ್ ಬಗ್ಗೆ ಹೇಳಿದ್ದೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟುಡಿಯೋದಲ್ಲಿ ಒಟ್ಟಿಗೆ ಕಾಣಿಸಿಕೊಂಡ 36ರ ವರ,‌ 82ರ ವಧು: ಪ್ರೀತಿ, ಸೆಕ್ಸ್ ಬಗ್ಗೆ ಹೇಳಿದ್ದೇನು…..?

ಬ್ರಿಟನ್‌ನ ದಂಪತಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡ್ತಿದ್ದಾರೆ. ದಂಪತಿ ನಡುವಿನ ವಯಸ್ಸು ಚರ್ಚೆಗೆ ಕಾರಣವಾಗಿದೆ. ಇಬ್ಬರ ಮಧ್ಯೆ 45 ವರ್ಷಗಳ ಅಂತರವಿದೆ. 36 ವರ್ಷದ ಹುಡುಗ ಮದುವೆಯಾಗಿದ್ದು 82ರ ಮಹಿಳೆಯನ್ನು.

ಈ ಯುಕೆ ದಂಪತಿ ಮದುವೆ ನಂತ್ರ ಮೊದಲ ಬಾರಿ  ಟಿವಿ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಲೈಂಗಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. 36 ವರ್ಷದ ಮೊಹಮ್ಮದ್, ಈಜಿಪ್ಟ್ ನಿವಾಸಿಯಾಗಿದ್ದು, 82 ವರ್ಷದ ಐರಿಸ್ ವಿವಾಹವಾಗಿದ್ದಾರೆ. ಈ ದಂಪತಿ  ಒಟ್ಟಿಗೆ ಟಿವಿ ಸ್ಟುಡಿಯೋವನ್ನು ತಲುಪಿದಾಗ, ಇಬ್ಬರೂ ತಮ್ಮ ವಯಸ್ಸಿನ ಅಂತರ, ಪುನರ್ಮಿಲನ ಮತ್ತು ಲೈಂಗಿಕ ಜೀವನದ ಬಗ್ಗೆ ಅನೇಕ ತಮಾಷೆಯ ವಿಷ್ಯಗಳನ್ನು ಹೇಳಿದ್ದಾರೆ.

ಲೈಂಗಿಕ ಜೀವನದ ಬಗ್ಗೆ ಮಾತನಾಡಿದ ಐರಿಸ್, ತಾನು ಮೊಹಮ್ಮದ್‌ನೊಂದಿಗೆ ತುಂಬಾ ಸಂತೋಷವಾಗಿದ್ದೇನೆ ಎಂದಿದ್ದಾರೆ. ಮೊಹಮ್ಮದ್ ಜೊತೆ ಮೊದಲ ಬಾರಿ ಮಂಚದ ಮೇಲೆ ಕುಳಿತಾಗ, 82 ವರ್ಷದ ಐರಿಸ್ ತುಂಬಾ ರೋಮಾಂಚನಗೊಂಡಿದ್ದರಂತೆ. ಇದೊಂದು ಸುಂದರ ಕ್ಷಣವೆಂದು ಐರಿಸ್ ಹೇಳಿದ್ದಾರೆ.

ಈ ಹಿಂದೆ ಇಬ್ಬರೂ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ವೀಸಾ ಕಾರಣಕ್ಕೆ ಇಬ್ಬರು ದೂರ ಇರಬೇಕಾಗಿತ್ತು. ಕಳೆದ ತಿಂಗಳಷ್ಟೇ ಈಜಿಪ್ಟ್ ನಿಂದ ಮೊಹಮ್ಮದ್ ಐರಿಸ್ ಮನೆಗೆ ಬಂದಿದ್ದಾರೆ.

82 ವರ್ಷದ ಐರಿಸ್ ಪಿಂಚಣಿ ಪಡೆಯುತ್ತಾರೆ. ವಯಸ್ಸಿನ ಅಂತರದ ಬಗ್ಗೆ ದಂಪತಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಈ ಟೀಕೆಗಳ ಬಗ್ಗೆ ಮಾತನಾಡಿದ ಮೊಹಮ್ಮದ್, ಐರಿಸ್ ನೋಡಿದ ತಕ್ಷಣ ಆಕಾಶದಲ್ಲಿ ಹಾರುತ್ತಿರುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.

ಕಳೆದ ತಿಂಗಳು, ಐರಿಸ್ ಭೇಟಿಗೆ ವೀಸಾ ಸಿಕ್ಕಿದೆ ಎಂಬುದು ಗೊತ್ತಾಗುತ್ತಿದ್ದಂತೆ ನಾನು ಜೋರಾಗಿ ಕೂಗಾಡಿದ್ದೆ. ಕೆಲವರು ನನ್ನನ್ನು ಹುಚ್ಚ ಎಂದುಕೊಂಡಿದ್ದರು ಎಂದು ಮೊಹಮ್ಮದ್ ಹೇಳಿದ್ದಾರೆ. ಮೊಹಮ್ಮದ್ ಬ್ರಿಟನ್ ತಲುಪಿದಾಗ ಇಬ್ಬರೂ ವಿಮಾನ ನಿಲ್ದಾಣದಲ್ಲಿಯೇ ಅಪ್ಪಿಕೊಂಡಿದ್ದರಂತೆ. ಆ ಕ್ಷಣ ನನಗೆ ತುಂಬಾ ವಿಶೇಷವಾಗಿತ್ತು. ಜನರ ಟೀಕೆ ನನಗೆ ಸಾಕಷ್ಟು ಒತ್ತಡವನ್ನುಂಟು ಮಾಡಿತ್ತು ಎಂದು ಮೊಹಮ್ಮದ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...