alex Certify ಸಂಚಾರಿ ವಿಜಯ್ ಹುಟ್ಟುಹಬ್ಬದಂದು ರಿಲೀಸ್ ಆಯ್ತು ‘ಲಂಕೆ’ ಚಿತ್ರದ ಪೋಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಚಾರಿ ವಿಜಯ್ ಹುಟ್ಟುಹಬ್ಬದಂದು ರಿಲೀಸ್ ಆಯ್ತು ‘ಲಂಕೆ’ ಚಿತ್ರದ ಪೋಸ್ಟರ್

ಕಳೆದ ತಿಂಗಳು ಬೈಕ್ ಅಪಘಾತದಿಂದ ನಿಧನರಾದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇತ್ತೀಚೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು ರಾಮ್ ಪ್ರಸಾದ್ ಎಮ್ ಡಿ ನಿರ್ದೇಶನದ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರದಲ್ಲೂ ಸಂಚಾರಿ ವಿಜಯ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

IPL ಗೂ ಮುನ್ನ ಸ್ಲಿಮ್ ಆದ ಕೂಲ್ ಕ್ಯಾಪ್ಟನ್

ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಲಂಕೆ’ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಅನ್ನು ಲೂಸ್ ಮಾದ ಯೋಗಿ ಕೂಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ದಿ ಗ್ರೇಟ್ ಎಂಟರ್ ಟೇನರ್ ಬ್ಯಾನರ್ ನಡಿ ಸುರೇಖಾ ರಾಮ್ ಪ್ರಸಾದ್ ಹಾಗೂ ಪಟೇಲ್ ಶ್ರೀನಿವಾಸ್ ನಾಗವಾರ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ‘ತಲೆದಂಡ’ ಮೇಲೊಬ್ಬ ಮಾಯಾವಿ’ ‘ಪಿರಂಗಿಪುರ’ ಹಾಗೂ ‘ಪುಕ್ಸಟ್ಟೆ ಲೈಫು’ ಚಿತ್ರದಲ್ಲಿ ಅಭಿನಯಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...