alex Certify ಶ್ವಾಸಕೋಶ ಸ್ವಚ್ಛಗೊಳಿಸಲು ಇಲ್ಲಿದೆ ‘ಟಿಪ್ಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾಸಕೋಶ ಸ್ವಚ್ಛಗೊಳಿಸಲು ಇಲ್ಲಿದೆ ‘ಟಿಪ್ಸ್’

ಧೂಳು, ಕಲುಷಿತ ಗಾಳಿ, ವಾತಾವರಣದ ಹಾನಿಕಾರಕ ಅಂಶಗಳಿಂದ ನಮ್ಮ ಶ್ವಾಸಕೋಶವು ತೊಂದರೆಗೀಡಾಗುತ್ತದೆ. ಇದರಿಂದ ಸರಿಯಾಗಿ ಉಸಿರಾಟವಾಡುವುದಕ್ಕೆ ಆಗದೇ ತೊಂದರೆ ಅನುಭವಿಸಬೇಕಾಗುತ್ತದೆ.

ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳಿಂದ ನಮ್ಮ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು. ಸರಾಗವಾಗಿ ಉಸಿರಾಡಬಹುದು.

ಮೊದಲಿಗೆ ಒಂದು ಲೀಟರ್ ಶುದ್ಧವಾದ ನೀರು ತೆಗೆದುಕೊಳ್ಳಿ. ಅದಕ್ಕೆ ಕಾಲು ಕಪ್ ನಷ್ಟು ಕಲ್ಲು ಸಕ್ಕರೆಯನ್ನು ಸೇರಿಸಿ. ಹಾಗೇ ಕಾಲು ಕಪ್ ನಷ್ಟು ತುರಿದ ಈರುಳ್ಳಿ, ಹಾಗೂ ಶುಂಠಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಕುದಿಸಿ. ಕುದಿಯಲು ಆರಂಭಿಸಿದಾಗ 1 ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಒಂದು ಲೀಟರ್ ನೀರು ಅರ್ಧ ಲೀಟರ್ ವಾಗುವವರೆಗೆ ಚೆನ್ನಾಗಿ ಕುದಿಸಿ. ನಂತರ ಶೋಧಿಸಿ ಇಟ್ಟುಕೊಳ್ಳಿ.

ಉಗುರು ಬೆಚ್ಚಗಿನ ಈ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಿರಿ. ಇದರಿಂದ ನಿಮ್ಮ ಶ್ವಾಸಕೋಶ ಕ್ಲೀನ್ ಆಗುವುದರ ಜತೆಗೆ ಗಂಟಲುರಿ, ಗಂಟಲಿನ ಕಿರಿಕಿರಿ ಸಮಸ್ಯೆಯಿಂದ ಕೂಡ ಪಾರಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...