alex Certify ವ್ಯಾಸಂಗ ಮಾಡುತ್ತಲೇ ಪೇಪರ್ ಹಾಕುವ ಬಾಲಕ: ನೀವೂ ಕೇಳಿ ಆತನ ಆತ್ಮವಿಶ್ವಾಸದ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಸಂಗ ಮಾಡುತ್ತಲೇ ಪೇಪರ್ ಹಾಕುವ ಬಾಲಕ: ನೀವೂ ಕೇಳಿ ಆತನ ಆತ್ಮವಿಶ್ವಾಸದ ಮಾತು

ಪೋಷಕರು ಮಕ್ಕಳಿಗೆ ಸುಲಭವಾಗಿ ದೊರಕುವುದನ್ನು ಏನನ್ನೂ ಕೊಡಬಾರದು. ಮಕ್ಕಳು ಕಷ್ಟಪಟ್ಟು ದುಡಿದು ವ್ಯಾಸಂಗ ಮಾಡಿದರೆ ಅವರಿಗೆ ನಿಜವಾದ ಹಣದ ಮಹತ್ವ ಗೊತ್ತಾಗುತ್ತದೆ. ಅಂತಹ ಒಬ್ಬ ಬಾಲಕನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ವ್ಯಾಸಂಗ ಮಾಡುತ್ತಲೇ ಬಾಲಕನೊಬ್ಬ ಸೈಕಲಿನಲ್ಲಿ ಮನೆ-ಮನೆಗೆ ಪೇಪರ್ ಹಾಕುವ ಕೆಲಸ ಮಾಡುತ್ತಿದ್ದಾನೆ. ಈತನ ವಿಡಿಯೋ ವೈರಲ್ ಆಗಿದ್ದು, ಆತನಲ್ಲಿರುವ ಆತ್ಮವಿಶ್ವಾಸದ ಮಾತು ಕೇಳಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

ಗಣೇಶ ಚತುರ್ಥಿಯಂದು ಕಳೆದು ಹೋದ ಮಗ ಸಿಕ್ಕ ಹೃದಯಸ್ಪರ್ಶಿ ಕಥೆ ವೈರಲ್

ವಿಡಿಯೋ ಹಂಚಿಕೊಂಡ ವ್ಯಕ್ತಿಯೊಬ್ಬರು, “ಎಂತಹ ಆತ್ಮವಿಶ್ವಾಸದ ಮಾತುಗಳು.. ಕಣ್ಣುಗಳಲ್ಲಿ ಭಯವಿಲ್ಲ, ಪದಗಳಲ್ಲಿ ನಡುಕವಿಲ್ಲ, ಸೂಪರ್. ಇಷ್ಟಪಟ್ಟು ಕಷ್ಟಪಟ್ಟು ಕೆಲಸ ಮಾಡುವ ಜನರಲ್ಲಿ ಮಾತ್ರ ಈ ರೀತಿಯ ಆತ್ಮವಿಶ್ವಾಸವನ್ನು ಕಾಣಬಹುದು. ಏನೇ ಇರಲಿ, ಉತ್ತಮ ಶಿಕ್ಷಣ, ಬುದ್ಧಿವಂತಿಕೆ ಮತ್ತು ಆತ್ಮವಿಶ್ವಾಸದಿಂದ ಶ್ರೇಷ್ಠನಾಗಲಿ ಎಂದು ಆಶಿಸುತ್ತೇನೆ” ಎಂದು ಬರೆದಿದ್ದಾರೆ.

ಇನ್ನು ಬಾಲಕನ ಆತ್ಮವಿಶ್ವಾಸದ ಮಾತುಗಳನ್ನು ಕೇಳಿದ ನೆಟ್ಟಿಗರು ಕೂಡ ಶಭಾಷ್ ಎಂದಿದ್ದಾರೆ. ಬಾಲಕನಿಗೆ ಒಳ್ಳೆಯದಾಗಲಿ ಎಂದು ಮನಸಾರೆ ಹಾರೈಸಿದ್ದಾರೆ.

ఏం కాన్ఫిడెన్స్ ర చోటు, కళ్ళలో బెదురులేదు, మాటల్లో వణుకు లేదు, సూపర్.?ఇష్టపడి కష్టపడే వ్యక్తులలో మాత్రమే ఇలాంటి…

Posted by శివాజీ రాజ్ on Wednesday, September 22, 2021

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...