alex Certify ‘ರೌಡಿ ಬೇಬಿ’ ಹಾಡಿಗೆ ಹುಚ್ಚೆದ್ದು ಕುಣಿದ ಕೊಲ್ಕೊತ್ತಾ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರೌಡಿ ಬೇಬಿ’ ಹಾಡಿಗೆ ಹುಚ್ಚೆದ್ದು ಕುಣಿದ ಕೊಲ್ಕೊತ್ತಾ ಜೋಡಿ

ರೌಡಿ ಬೇಬಿ…… ಹಾಡು ಸಾಮಾನ್ಯವಾಗಿ ಪರಿಚಿತ. ಧನುಷ್​ ಹಾಗೂ ಸಾಯಿ ಪಲ್ಲವಿಯವರ ಸ್ಟೆಪ್​ನಿಂದಾಗಿಯೇ ಈ ಹಾಡು ಫೇಮಸ್​ ಆಗಿತ್ತು. ಇದೀಗ ಕೊಲ್ಕೊತ್ತಾದ ಜೋಡಿಯೊಂದು ಇದೇ ಹಾಡಿಗೆ ಡ್ಯಾನ್ಸ್​ ಮಾಡಿದ್ದು, ಅದರ ವಿಡಿಯೋ ಜಾಲತಾಣದಲ್ಲಿ ಧೂಳೆಬ್ಬಿಸಿದೆ.

2018ರಲ್ಲಿ ಬಿಡುಗಡೆಯಾದ ‘ಮಾರಿ 2’ ಚಲನಚಿತ್ರದ ಈ ಹಾಡು ಅನೇಕರನ್ನು ಕುಣಿಯುವಂತೆ ಪ್ರೇರೇಪಿಸಿತ್ತು. ಅನೇಕರು ಸಾಯಿ ಪಲ್ಲವಿ ಮತ್ತು ಧನುಷ್​ ಮಾಡಿದಂತೆ ನೃತ್ಯ ಅನುಕರಿಸಲು ಪ್ರಯತ್ನಿಸಿದ್ದಾರೆ, ಆದರೆ ಎಲ್ಲರೂ ಯಶಸ್ವಿಯಾಗಲಿಲ್ಲ.

ಇದೀಗ ಕೋಲ್ಕತ್ತಾದ ನೃತ್ಯ ನಿರ್ದೇಶಕ ಜೋಡಿಯ ಹೊಸ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಸೌರಭ್​ ಮತ್ತು ಅನೂಷಾ ಜೋಡಿ ಧನುಷ್​ ಮತ್ತು ಸಾಯಿ ಪಲ್ಲವಿ ಅವರಂತೆಯೇ ಬಟ್ಟೆ ಧರಿಸಿ ಮನಪೂರ್ವಕವಾಗಿ ಡ್ಯಾನ್ಸ್​ ಮಾಡಿದ್ದಾರೆ.

ಮೂಲ ಡ್ಯಾನ್ಸ್​ಗೆ ಶೇ.90ರಷ್ಟು ಹೊಂದಾಣಿಕೆಯಾಗಿದೆ ಎಂಬ ಪ್ರತಿಕ್ರಿಯೆಯೂ ಬಂದಿದ್ದು, 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ನೃತ್ಯವನ್ನು ಇಷ್ಟಪಟ್ಟು ಪ್ರಶಂಸೆ ವ್ಯಕ್ತಪಡಿಸಿ ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...