alex Certify ರೈತರ ಮಕ್ಕಳಿಗೊಂದು ಮುಖ್ಯ ಮಾಹಿತಿ: ಮುಖ್ಯಮಂತ್ರಿ ‘ರೈತ ವಿದ್ಯಾ ನಿಧಿ’ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಮಕ್ಕಳಿಗೊಂದು ಮುಖ್ಯ ಮಾಹಿತಿ: ಮುಖ್ಯಮಂತ್ರಿ ‘ರೈತ ವಿದ್ಯಾ ನಿಧಿ’ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಯನ್ನು ಘೋಷಿಸಿದ್ದರು.

ಈ ಹಿನ್ನಲೆಯಲ್ಲಿ ಇದೀಗ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಶಿಷ್ಯ ವೇತನ ನೋಂದಣಿಗಾಗಿ ಆಹ್ವಾನಿಸಲಾಗಿದೆ. ಜಾಲತಾಣ https://ssp.postmetric.karnataka.gov.in/ಮೂಲಕ ಶಿಷ್ಯ ವೇತನಕ್ಕಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಕೆ ಹಂತಗಳು ಹೀಗಿದ್ದು, ಮೊದಲನೇ ಹಂತದಲ್ಲಿ ವಿದ್ಯಾರ್ಥಿಗಳ ಖಾತೆ ಸೃಜನೆ, ಎರಡನೇ ಹಂತದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ದಾಖಲಿಸಬೇಕಾಗುತ್ತದೆ. 2021-22 ನೇ ಶೈಕ್ಷಣಿಕ ವರ್ಷದ ದಾಖಲಾತಿ ಪೂರ್ಣಗೊಂಡ ನಂತರ ಎರಡನೇ ಹಂತದಲ್ಲಿ ಮಾಹಿತಿ ನಮೂದು ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ ನೀಡಲಾಗುವ ವಾರ್ಷಿಕ ಶಿಷ್ಯ ವೇತನದ ವಿವರ ಕೆಳಕಂಡಂತಿದ್ದು, ಪಿಯುಸಿ / ಐಟಿಐ / ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ 2,500 ರೂ. ವಿದ್ಯಾರ್ಥಿನಿಯರಿಗೆ ಮತ್ತು ಅನ್ಯಲಿಂಗದವರಿಗೆ 3,000 ರೂ. ನೀಡಲಾಗುತ್ತದೆ.

ಬಿಎ / ಬಿಎಸ್ಸಿ / ಬಿಕಾಂ ಇನ್ನಿತರ ಪದವಿ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 5,000 ರೂ. ವಿದ್ಯಾರ್ಥಿನಿಯರು ಮತ್ತು ಅನ್ಯಲಿಂಗದವರಿಗೆ 5,500 ರೂ. ನೀಡಲಾಗುತ್ತದೆ. ಅದೇ ರೀತಿ ಎಲ್.ಎಲ್.ಬಿ / ಪ್ಯಾರಾಮೆಡಿಕಲ್ / ಬಿ ಫಾರ್ಮ್ / ನರ್ಸಿಂಗ್ ಇನ್ನಿತರೆ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 7,500 ರೂ. ವಿದ್ಯಾರ್ಥಿನಿಯರು ಮತ್ತು ಅನ್ಯಲಿಂಗದವರಿಗೆ 8,000 ರೂ. ನೀಡಲಾಗುತ್ತದೆ.

ಎಂಬಿಬಿಎಸ್ / ಬಿಇ / ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರು ಮತ್ತು ಅನ್ಯ ಲಿಂಗದವರಿಗೆ 11,000 ರೂ. ನೀಡಲಾಗುತ್ತದೆ.

ಅರ್ಹ ವಿದ್ಯಾರ್ಥಿ / ವಿದ್ಯಾರ್ಥಿನಿ / ಅನ್ಯಲಿಂಗದವರು ರೈತರ ಮಕ್ಕಳಾಗಿರಬೇಕು. ಅಲ್ಲದೆ ಅವರ ತಂದೆ ಅಥವಾ ತಾಯಿಯು ರೈತರ ಗುರುತಿನ ಸಂಖ್ಯೆ (FID)ಯನ್ನು ಹೊಂದಿರಬೇಕು. 2021-22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಹೊಂದಿರಬೇಕಾಗಿದ್ದು, ಪುನರಾವರ್ತಿತ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಿರುವುದಿಲ್ಲ ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...