alex Certify ಮೈ ಮೇಲೆ ಮೂಡುವ ಗಂಟುಗಳಿಗೆ ಇಲ್ಲಿದೆ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಮೇಲೆ ಮೂಡುವ ಗಂಟುಗಳಿಗೆ ಇಲ್ಲಿದೆ ʼಮನೆ ಮದ್ದುʼ

ಚರ್ಮದ ಕಪ್ಪು ಅಥವಾ ಕಂದು ಬಣ್ಣದ ಗಂಟು ಕೆಲವರಲ್ಲಿ ಕಂಡು ಬರುತ್ತದೆ. ಕುತ್ತಿಗೆ, ಕೈ, ಬೆನ್ನು ಅಥವಾ ದೇಹದ ಇತರ ಭಾಗಗಳಲ್ಲಿ ಉಂಟಾಗುವ ಈ ಗಂಟು ನೋವುಂಟು ಮಾಡುವುದಿಲ್ಲ. ಆದರೆ ಇವು ಅಸಹ್ಯವಾಗಿ ಕಾಣುತ್ತವೆ. ಕೆಲವರು ಶಸ್ತ್ರಚಿಕಿತ್ಸೆ ಅಥವಾ ಲೇಸರ್  ಚಿಕಿತ್ಸೆ ಮೂಲಕ ಗಂಟು ತೆಗೆಸಿಕೊಳ್ತಾರೆ. ಇದು ದುಬಾರಿಯಾದ ಕಾರಣ ಮನೆ ಮದ್ದನ್ನು ಬಳಸಿ ಗಂಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ಈರುಳ್ಳಿ ರಸವನ್ನು ತೆಗೆದು ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ನಿಯಮಿತವಾಗಿ ಗಂಟಿಗೆ ಹಚ್ಚಿ. ಇದರಿಂದ ಗಂಟು ಕಣ್ಮರೆಯಾಗುತ್ತದೆ.

ಗಂಟಿನ ಬುಡವನ್ನು ದಾರದಿಂದ ಕಟ್ಟಬೇಕು. ರಕ್ತದ ಹರಿವು ಆ ಜಾಗದಲ್ಲಿ ಕಡಿಮೆಯಾಗಿ ಗಂಟು ಒಣಗಲು ಪ್ರಾರಂಭಿಸುತ್ತದೆ. ಕೆಲ ದಿನಗಳ ನಂತ್ರ ಉದುರಿ ಹೋಗುತ್ತದೆ.

ಅಗರಬತ್ತಿಯನ್ನು ಗಂಟು ಆದ ಜಾಗದ ಮೇಲೆ ತಾಕಿಸಿ.  8-10 ಬಾರಿ ಹೀಗೆ ಮಾಡಿದ್ರೆ ಅದು ಒಣಗುತ್ತದೆ. ಆದರೆ ಅಗರಬತ್ತಿಯ ತುದಿ ವಾರ್ಟ್ಸ್ ಗೆ  ಮಾತ್ರ ಹಚ್ಚಿ.

ಆಲದ ಮರದ ಎಲೆಗಳ ರಸ ತೆಗೆದು ದಿನಕ್ಕೆ ಎರಡು ಬಾರಿ ಹಚ್ಚಿರಿ. ಇದು ವಾರ್ಟ್ಸ್ ಗುಣಪಡಿಸುವುದಲ್ಲದೆ ಚರ್ಮವನ್ನು ಮೃದುಗೊಳಿಸುತ್ತದೆ.

ಹತ್ತಿ ಮೇಲೆ ಸೇಬು ವಿನೆಗರ್  ಹಾಕಿ ಮತ್ತು ಕನಿಷ್ಠ 3 ಬಾರಿ ದಿನಕ್ಕೆ ಅಪ್ಲಾಯ್ ಮಾಡಿ. ಕೆಲವೇ ದಿನಗಳಲ್ಲಿ ಗಂಟು ಮಾಯವಾಗುತ್ತದೆ.

ಸಮಾನ ಪ್ರಮಾಣದ ಅಡಿಗೆ ಸೋಡಾ ಮತ್ತು ಕ್ಯಾಸ್ಟರ್ ಆಯಿಲ್ ಮಿಶ್ರಣ ಮಾಡಿ ಹಚ್ಚಬಹುದು. ಅದನ್ನು ರಾತ್ರಿ ಮಲಗುವುದಕ್ಕೂ ಮುನ್ನ ಚೆನ್ನಾಗಿ ತೊಳೆಯಿರಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...