alex Certify ಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ

ಮಾವಿನ ಹಣ್ಣು ಎಲ್ಲರೂ ಇಷ್ಟಪಡುವಂತಹ ಸಿಹಿಯಾದ, ರುಚಿಯಾದ ಹಣ್ಣು. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಸೌಂದರ್ಯ ವೃದ್ಧಿಸಲು ಕೂಡ ತುಂಬಾ ಉಪಯೋಗಕಾರಿ. ಹೇಗೆ ಅಂದರೆ.

* ಮಾವಿನ ಹಣ್ಣಿನ ತಿರುಳು ಹಾಗೂ 2 ಟೀ ಚಮಚ ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ½ ಗಂಟೆ ಬಿಟ್ಟು ತೊಳೆದರೆ ಕೂದಲು ರೇಷ್ಮೆಯಂತೆ ನಯವಾಗುತ್ತದೆ.

* 1 ಹಣ್ಣಾದ ಮಾವಿನ ಹಣ್ಣಿನ ತಿರುಳಿಗೆ 2 ಮೊಟ್ಟೆಯ ಹಳದಿ ಭಾಗ ಹಾಗೂ 2 ಚಮಚ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 45 ನಿಮಿಷಗಳ ನಂತರ ಶಾಂಪೂವಿನಿಂದ ತೊಳೆಯಿರಿ. ಇದರಿಂದ ಕೂದಲು ನಯವಾಗಿ ಬಲವಾಗುತ್ತದೆ. ಅಲ್ಲದೇ ಇದು ಕೂದಲ ಬೆಳವಣೆಗೆಗೂ ಸಹಕಾರಿ.

* ಮಾವಿನ ಹಣ್ಣಿನ ತಿರುಳಿಗೆ 1 ಚಮಚ ಅಲೊವೆರಾ ಜೆಲ್ ಹಾಗೂ 1 ಚಮಚ ಹರಳೆಣ್ಣೆ ಮಿಕ್ಸ್ ಮಾಡಿ. ಇದು ಕೂದಲು ಹಾನಿಗೊಳಗಾಗುವುದನ್ನು ಮತ್ತು ಕೂದಲು ಕವಲೊಡೆಯುವುದನ್ನು ತಡೆಗಟ್ಟುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...