alex Certify ಭೂಮಿಯ ಮೇಲೆ ಇರುವೆಗಳು ಎಷ್ಟಿರಬಹುದು ಯೋಚಿಸಿದ್ದೀರಾ ? ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಪಕ್ಕಾ ಲೆಕ್ಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿಯ ಮೇಲೆ ಇರುವೆಗಳು ಎಷ್ಟಿರಬಹುದು ಯೋಚಿಸಿದ್ದೀರಾ ? ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಪಕ್ಕಾ ಲೆಕ್ಕ….!

ಮನುಷ್ಯರು ಮಾತ್ರವಲ್ಲ ಎಲ್ಲಾ ಬಗೆಯ ಜೀವಿಗಳು ಈ ಭೂಮಿಯ ಮೇಲಿವೆ. ಅವುಗಳಲ್ಲೊಂದು ಇರುವೆಗಳು. ಭೂಮಿಯ ಮೇಲೆ ಎಷ್ಟು ಇರುವೆಗಳು ಇರಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಒಮ್ಮೆಲೇ ಸಾವಿರಾರು ಇರುವೆಗಳನ್ನು ನಾವು ನೋಡುತ್ತೇವೆ. ಆದ್ರೆ ಅವುಗಳ ನಿಖರ ಸಂಖ್ಯೆಯನ್ನು ಅಂದಾಜಿಸುವುದು ಅಸಾಧ್ಯ ಎನಿಸಿತ್ತು.

ಈಗ ಇಡೀ ಭೂಮಿಯಲ್ಲಿ ಇರುವೆಗಳು ಎಷ್ಟಿವೆ ಎಂಬುದು ಬಹಿರಂಗವಾಗಿದೆ. ಸಂಶೋಧಕರ ತಂಡ ಈ ಅಸಾಧ್ಯ ಗುರಿಯನ್ನು ಸಾಧಿಸಿದೆ. ಪ್ರಪಂಚದಾದ್ಯಂತದ ಇರುವ ಮೈದಾನಗಳಿಗೆ ಭೇಟಿ ನೀಡುವ ಮೂಲಕ ಈ ಸಂಶೋಧನೆ ಮಾಡಲಾಗಿದೆ

ಹಾಂಗ್ ಕಾಂಗ್ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆ ಇದು. ಈ ಸಂಶೋಧನೆಯ ಹಿಂದೆ ಬಹಳಷ್ಟು ಪರಿಶ್ರಮವಿದೆ. ಅಂಕಿ-ಅಂಶಗಳ ಪ್ರಕಾರ ಭೂಮಿಯ ಮೇಲೆ ಸುಮಾರು ಎರಡು ಲಕ್ಷ ಟ್ರಿಲಿಯನ್ ಅಥವಾ ಎರಡು ಕೋಟಿ ಬಿಲಿಯನ್ ಇರುವೆಗಳಿವೆ. ಅಂಕಿ-ಅಂಶಗಳಲ್ಲಿ ನಿಖರವಾಗಿ ಹೇಳಲಾದ ಸಂಖ್ಯೆಗಳನ್ನು ಅಂಕಿಗಳಲ್ಲಿ ಬರೆದರೆ 20,000 ಮಿಲಿಯನ್ ಮಿಲಿಯನ್ ಅಥವಾ ಎರಡರ ನಂತರ 16 ಸೊನ್ನೆಗಳು (20,00,00,00,00,00,00,000) ಇವೆ. ಅಷ್ಟೇ ಅಲ್ಲ ಇರುವೆಗಳಲ್ಲಿ 15,700 ಕ್ಕೂ ಜಾತಿಗಳು ಮತ್ತು ಇರುವೆಗಳ ಉಪಜಾತಿಗಳಿವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

ವಿಜ್ಞಾನಿಗಳು ಪ್ರಪಂಚದಾದ್ಯಂತದ ಸುಮಾರು 500 ಇರುವೆಗಳನ್ನು ಅಧ್ಯಯನ ಮಾಡಿದ್ದಾರೆ. ಈ ಹಿಂದೆ ಹಲವು ಬಾರಿ ಇಂತಹ ಪ್ರಯತ್ನಗಳು ನಡೆದಿದ್ದರೂ ಇರುವೆಗಳ ನಿಖರ ಸಂಖ್ಯೆಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಸಂಶೋಧಕರು ಆಂಗ್ಲೇತರ ಸಾಹಿತ್ಯವನ್ನೂ ಅಧ್ಯಯನ ಮಾಡಿದ್ದಾರೆ. ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿರುವ ದಾಖಲೆಗಳನ್ನು ಅಧ್ಯಯನ ಮಾಡಿ ಇರುವೆಗಳ ಲೆಕ್ಕ ಹಾಕಿದ್ದಾರೆ. ಈ ಅಂಕಿ ಅಂಶವು ಸಾಕಷ್ಟು ಆಘಾತಕಾರಿ ಎಂದು ಸಂಶೋಧಕರು ಸ್ವತಃ ಒಪ್ಪಿಕೊಂಡಿದ್ದಾರೆ.

ಇದು ಈ ಹಿಂದೆ ಅಂದಾಜು ಮಾಡಲಾದ ಜಾಗತಿಕ ಇರುವೆಗಳ ಜನಸಂಖ್ಯೆಗಿಂತ 2 ರಿಂದ 20 ಪಟ್ಟು ಹೆಚ್ಚಾಗಿದೆ. ವರದಿಯ ಪ್ರಕಾರ ಪ್ರಪಂಚದಾದ್ಯಂತ ಇರುವ ಇರುವೆಗಳಲ್ಲಿ ಒಟ್ಟು 12 ಮಿಲಿಯನ್ ಟನ್ ಇಂಗಾಲದ ಜೀವರಾಶಿ ಇದೆ. ಕಾಡುಗಳು, ಮರುಭೂಮಿಗಳು, ಹುಲ್ಲುಗಾವಲುಗಳು ಮತ್ತು ನಗರಗಳು ಸೇರಿದಂತೆ ಎಲ್ಲಾ ಖಂಡಗಳಲ್ಲಿನ ಪ್ರಮುಖ ಆವಾಸ ಸ್ಥಾನಗಳನ್ನು ಈ ಅಧ್ಯಯನದಲ್ಲಿ ಸೇರಿಸಲಾಗಿದೆ. ಮನುಷ್ಯರಿಗೆ ಇರುವೆಗಳು ಬಹಳ ಮುಖ್ಯ ಎಂದು ಸಹ ಹೇಳಲಾಗಿದೆ.

ಇರುವೆಗಳು ಪ್ರಕೃತಿಯ ಪ್ರಮುಖ ಭಾಗವಾಗಿದೆ. ಇರುವೆಗಳು ಮಣ್ಣನ್ನು ಗಾಳಿ ಮಾಡುತ್ತವೆ, ಬೀಜಗಳನ್ನು ಹರಡುತ್ತವೆ, ಸಾವಯವ ಪದಾರ್ಥಗಳನ್ನು ಒಡೆಯುತ್ತವೆ, ಇತರ ಪ್ರಾಣಿಗಳಿಗೆ ಆವಾಸಸ್ಥಾನವನ್ನು ಸೃಷ್ಟಿಸುತ್ತವೆ ಮತ್ತು ಆಹಾರ ಸರಪಳಿಯ ಪ್ರಮುಖ ಭಾಗವಾಗಿದೆ.ಇಷ್ಟೇ ಅಲ್ಲ, ಇರುವೆಗಳು ಮನುಷ್ಯರಿಗೆ ಪರಿಸರ ವ್ಯವಸ್ಥೆಯ ಸೇವೆಗಳನ್ನೂ ಒದಗಿಸುತ್ತವೆ. ಕೀಟನಾಶಕಗಳಿಗಿಂತ ಬೆಳೆಗಳನ್ನು ಬೆಳೆಯಲು ಸಹಾಯ ಮಾಡುವಲ್ಲಿ ಇರುವೆಗಳು ಹೆಚ್ಚು ಪರಿಣಾಮಕಾರಿ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ಕೆಲವು ಜಾತಿಗಳು ಕೂಡ ಇರುವೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಮಣ್ಣಿನಲ್ಲಿರುವ ಗಾಳಿಯ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಇರುವೆಗಳು ಪ್ರಮುಖ ಪಾತ್ರವಹಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...