alex Certify ಭಾರತದಲ್ಲಿ ಬಿಡುಗಡೆಯಾಗಿದೆ ಎರಡು ಹೊಸ ಎಲೆಕ್ಟ್ರಿಕ್‌ ಬೈಕ್‌…! ಇಲ್ಲಿದೆ ಅವುಗಳ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಬಿಡುಗಡೆಯಾಗಿದೆ ಎರಡು ಹೊಸ ಎಲೆಕ್ಟ್ರಿಕ್‌ ಬೈಕ್‌…! ಇಲ್ಲಿದೆ ಅವುಗಳ ವಿಶೇಷತೆ

HOP ಎಲೆಕ್ಟ್ರಿಕ್ ದೇಶದ ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದು.  HOP OXO ಮತ್ತು Hop OXO-X ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳನ್ನು ಈ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 1.25 ಲಕ್ಷ ರೂಪಾಯಿ. ಗ್ರಾಹಕರು ಈ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳನ್ನು ಹತ್ತಿರದ HOP ಸೆಂಟರ್‌ ಮೂಲಕ ಅಥವಾ ಕಂಪನಿಯ ವೆಬ್‌ಸೈಟ್ ಮೂಲಕ ಖರೀದಿಸಬಹುದು.

HOP OXO ಮತ್ತು OXO-X ಬಹಳ ಪರಿಚಿತ ಮತ್ತು ಸಾಂಪ್ರದಾಯಿಕ ವಿನ್ಯಾಸಗಳನ್ನು ಹೊಂದಿವೆ. ಹಾಗಾಗಿ ಬೈಕ್‌ ಪ್ರಿಯರನ್ನು ಇದು ಆಕರ್ಷಿಸಬಹುದು. HOP ಎಲೆಕ್ಟ್ರಿಕ್ ಮೊಬಿಲಿಟಿಯ ಸಿಇಒ ಮತ್ತು ಸಂಸ್ಥಾಪಕ ಕೇತನ್ ಮೆಹ್ತಾ ಮಾತನಾಡಿ, “ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿವೆ. ಈ ಬೆಳವಣಿಗೆಯು ಸುಸ್ಥಿರ, ಅನುಕೂಲಕರ ಮತ್ತು ಕೈಗೆಟುಕುವ ಚಲನಶೀಲತೆಯ ಪರಿಹಾರಗಳಿಗೆ ಕಾರಣವಾಗ್ತಿದೆ. HOP OXO ಅನ್ನೋದು ನೂರಾರು ಉದ್ಯೋಗಿಗಳ ಕಠಿಣ ಪರಿಶ್ರಮದ ಫಲಿತಾಂಶ. ಅವರು ತಮ್ಮ ಬೆವರು ಮತ್ತು ರಕ್ತವನ್ನು ಸುರಿಸಿ ಮಾರುಕಟ್ಟೆಗೆ ಅತ್ಯಂತ ಪ್ರಗತಿಪರ ಇ-ಬೈಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಈಗಾಗ್ಲೇ 5000 ಬೈಕ್‌ಗಳಿಗೆ ಪ್ರಿಬುಕ್ಕಿಂಗ್‌ ಸಹ ಇದೆ ಅಂತಾ ಹೇಳಿದ್ರು.

HOP OXO ಮತ್ತು OXO-X ವಿಶೇಷತೆ

HOP OXO ಬೈಕ್‌ 5 ಇಂಚಿನ ಆಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಹೊಂದಿದೆ. ಇದು ಕೊಳಕು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP67 ರೇಟಿಂಗ್‌ನೊಂದಿಗೆ ಬರುತ್ತದೆ. 6.2 kW ಮೋಟಾರ್‌ ಅಳವಡಿಸಿದ್ದು 72V ಆರ್ಕಿಟೆಕ್ಚರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಒಟ್ಟಾರೆ ಇದರಲ್ಲಿ ನಾಲ್ಕು ರೈಡಿಂಗ್ ಮೋಡ್‌ಗಳಿವೆ. ಅವುಗಳೆಂದರೆ ಇಕೋ, ಪವರ್, ಸ್ಪೋರ್ಟ್ ಮತ್ತು ಟರ್ಬೊ ಮೋಡ್‌. ಟರ್ಬೊ ಮೋಡ್‌ನಲ್ಲಿ ಕೇವಲ 4 ಸೆಕೆಂಡುಗಳಲ್ಲಿ 90 ಕಿಮೀ ವೇಗದಿಂದ ಸೊನ್ನೆಗೂ ಕಡಿಮೆ ಮಾಡಬಹುದು. ಇದು ಸ್ಮಾರ್ಟ್ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ.

ಒಮ್ಮೆ ಪೂರ್ತಿಯಾಗಿ ಚಾರ್ಜ್‌ ಮಾಡಿದ್ರೆ 150 ಕಿಮೀ ಓಡಬಲ್ಲದು. OXO ಅನ್ನು  ಪೋರ್ಟಬಲ್ ಸ್ಮಾರ್ಟ್ ಚಾರ್ಜರ್‌ ಜೊತೆಗೆ ಯಾವುದೇ 16 Amp ಪವರ್ ಸಾಕೆಟ್ ಮೂಲಕ ಚಾರ್ಜ್ ಮಾಡಬಹುದು. 4 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಇದು ಚಾರ್ಜ್‌ ಆಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...