alex Certify ಬ್ಯಾಟರಿ ಖಾಲಿಯಾಯಿತೆಂದು ಇ-ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೈದ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಟರಿ ಖಾಲಿಯಾಯಿತೆಂದು ಇ-ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೈದ್ಯ….!

ತಮಿಳುನಾಡಿನ ಅಂಬರ್ ಎಂಬಲ್ಲಿ ತಾನು ಚಲಾಯಿಸುತ್ತಿದ್ದ ಇ-ಬೈಕ್‌ನ ಬ್ಯಾಟರಿ ಖಾಲಿಯಾಯಿತೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಧ್ಯಾಹ್ನವೇ ಬ್ಯಾಟರಿ ಖಾಲಿಯಾಗಿದ್ದು, ವಾಹನದ ಉತ್ಪಾದಕರು ಸಂಜೆ ಸುಮಾರಿಗೆ ಸಹಾಯಕ್ಕೆ ಯಾರನ್ನಾದರೂ ಕಳುಹಿಸುತ್ತೇನೆ ಎಂದು ಹೇಳಿದ್ದರು, ಇಷ್ಟು ಹೊತ್ತು ಕಾಯುವ ವ್ಯವಧಾನ ಈ ವ್ಯಕ್ತಿಗಿರಲಿಲ್ಲ.

ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ 181 ಕಿ.ಮೀ. ಚಲಿಸಬಹುದು ಎಂದು ಕಂಪನಿ ಹೇಳಿದ್ದರೂ, 50-60 ಕಿ.ಮೀ. ಚಲಿಸುವಷ್ಟರಲ್ಲಿ ಇ-ಬೈಕ್‌ನ ಬ್ಯಾಟರಿ ಖಾಲಿಯಾಯಿತು. ಸಹಾಯವೂ ಬೇಗನೆ ಸಿಗುವುದಿಲ್ಲವೆಂದು ತಿಳಿದು ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿರುವ ಪೃಥ್ವಿರಾಜ್ ಗೋಪಿನಾಥನ್ ಬೈಕಿಗೆ ಬೆಂಕಿ ಹಚ್ಚಿದ್ದಾರೆ.

ಕಳೆದ ಜನವರಿಯಲ್ಲಿ ಇ-ಬೈಕ್ ಖರೀದಿಸಿದಲ್ಲಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ತಮ್ಮ ಸ್ವಂತ ಊರಾದ ಆಂಬರ್‌ನಲ್ಲಿ ಆರ್‌ಟಿಒ ಶುಲ್ಕವನ್ನು ಪಾವತಿಸುವ ಬದಲು ಕಂಪನಿ ಗುಡಿಯಟ್ಟಮ್ ಆರ್‌ಟಿಒದಲ್ಲಿ ವಾಹನವನ್ನು ನೋಂದಣಿ ಮಾಡಿಸಿತ್ತು. ಅಲ್ಲಿಂದ ವಾಪಸ್ ಬರುವ ದಾರಿಯಲ್ಲಿ ಈ ಘಟನೆ ನಡೆದಿದೆ.

ಅಲ್ಲದೆ ತಾನು ಪೆಟ್ರೋಲ್ ಸುರಿದು ಇ-ಬೈಕಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಹಿತ ಟ್ವೀಟ್ ಮಾಡಿ, ಕಂಪನಿ ವಿರುದ್ಧ ಸಿಟ್ಟು ಹೊರ ಹಾಕಿದ್ದಾರೆ, ತಕ್ಷಣವೇ ಕಂಪನಿಯ ಎಂಜಿನಿಯರ್‌ಗಳು ಕರೆ ಮಾಡಿ, ಮಾಧ್ಯಮದವರಿಗೆ ಯಾವುದೇ ಹೇಳಿಕೆಗಳನ್ನು ನೀಡಬೇಡಿ. ನಿಮಗೆ ಹೊಸ ಇ-ಬೈಕ್ ಕೊಡುತ್ತೇವೆ ಎಂದರೂ ಪೃಥ್ವಿರಾಜ್ ಒಪ್ಪಲಿಲ್ಲ, ಆದರೆ, ಕಂಪನಿಯು ಅಂದೇ ಹೊಸ ಇ-ಬೈಕ್ ಒಂದನ್ನು ಅವರ ಕ್ಲಿನಿಕ್‌ಗೆ ಕಳುಹಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಪ್ರಯತ್ನಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...