alex Certify ಬೂಟುಗಳಿಂದ ಬರುವ ಕೆಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭದ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೂಟುಗಳಿಂದ ಬರುವ ಕೆಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಕೆಲವರಿಗೆ ಪಾದಗಳಲ್ಲಿ ವಿಪರೀತ ಬೆವರು ಬರುತ್ತದೆ. ಇದರಿಂದಾಗಿ ಪಾದಗಳು ಮಾತ್ರವಲ್ಲದೆ ಚಪ್ಪಲಿ ಹಾಗೂ ಬೂಟುಗಳಿಂದ್ಲೂ ವಾಸನೆ ಬರಲಾರಂಭಿಸುತ್ತದೆ. ಇದು ಸಾಮಾನ್ಯ ಎನಿಸಿದ್ರೂ ನಮ್ಮನ್ನು ಮುಜುಗರಕ್ಕೀಡುಮಾಡುವಂತಹ ಸಮಸ್ಯೆ. ಕೆಲವೊಂದು ಸುಲಭದ ಟಿಪ್ಸ್‌ ಅನುಸರಿಸುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.  ದೀರ್ಘಕಾಲದವರೆಗೆ ಬೂಟುಗಳನ್ನು ಧರಿಸಿಯೇ ಇರುವುದರಿಂದ ಪಾದಗಳಲ್ಲಿ ಬೆವರು ಬರುತ್ತದೆ. ಶೂ ಮತ್ತು ಸಾಕ್ಸ್‌ನಲ್ಲಿ ನಿರಂತರ ತೇವಾಂಶವಿದ್ದು, ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ವಾಸನೆ ಬರಲು ಶುರುವಾಗುತ್ತದೆ.

ಬೆವರು ಹೀರಿಕೊಳ್ಳುವ ಸಾಕ್ಸ್ ಧರಿಸಿ

ಶೂಗಳು ಮತ್ತು ಪಾದಗಳ ವಾಸನೆಯ ಹಿಂದಿನ ಕಾರಣವೆಂದರೆ ಬೆವರುವುದು.  ಅದನ್ನು ಕಡಿಮೆ ಮಾಡಲು ಬೆವರು ಹೀರಿಕೊಳ್ಳುವ ಸಾಕ್ಸ್‌ಗಳನ್ನು ಧರಿಸಬೇಕು. ಪಾದಗಳು ಬೆವರಿದ್ರೂ ತೇವಾಂಶ ಇರುವುದಿಲ್ಲ.

ನಿಯಮಿತವಾಗಿ ಶೂಗಳನ್ನು ತೊಳೆಯಿರಿ…

ಶೂಗಳಲ್ಲಿ ಕೆಟ್ಟ ವಾಸನೆಯ ಸಮಸ್ಯೆ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದನ್ನು ತಪ್ಪಿಸಲು ಬೂಟುಗಳು ಮತ್ತು ಸಾಕ್ಸ್‌ಗಳನ್ನು ನಿಯಮಿತವಾಗಿ ತೊಳೆಯಬೇಕು. ನಂತರ ಅವುಗಳನ್ನು ಚೆನ್ನಾಗಿ ಒಣಗಿಸುವುದು ಸಹ ಅಗತ್ಯವಾಗಿದೆ.

ತೊಳೆಯಬಹುದಾದ ಇನ್ಸೊಲ್‌ಗಳನ್ನು ಬಳಸಿ

ಪ್ರತಿ ವಾರ ಬೂಟುಗಳನ್ನು ತೊಳೆಯಲು ಸಾಧ್ಯವಿಲ್ಲ. ಆದ್ದರಿಂದ ತೊಳೆಯಬಹುದಾದ ಇನ್ಸೋಲ್‌ಗಳನ್ನು ಬಳಸಿ. 4-5 ಬಾರಿ ಧರಿಸಿದ ನಂತರ ಶೂಗಳ ಬದಲು ಇನ್‌ಸೋಲ್‌ಗಳನ್ನು ತೊಳೆದುಬಿಡಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶೂಗಳ ವಾಸನೆಯಿಂದ ಪರಿಹಾರವನ್ನು ನೀಡುತ್ತದೆ ಮತ್ತು ಶೂಗಳು ತಾಜಾ ಆಗಿರುತ್ತವೆ.

ಡಿಯೋಡ್ರೆಂಟ್‌ ಬಳಸಬಹುದು

ತೇವಾಂಶದ ನಂತರ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾದಿಂದ ಕಾಲು ಮತ್ತು ಬೂಟುಗಳ ವಾಸನೆ ಬರುತ್ತದೆ. ಆದ್ದರಿಂದ, ಪಾದಗಳನ್ನು ಒಣಗಿಸಲು ಪ್ರಯತ್ನಿಸಿ. ಏಕೆಂದರೆ ಪಾದಗಳು ಒಣಗಿದ್ದರೆ ಬ್ಯಾಕ್ಟೀರಿಯಾ ಇರುವುದಿಲ್ಲ ಮತ್ತು ವಾಸನೆಯಿಂದಲೂ ಮುಕ್ತಿ ಸಿಗುತ್ತದೆ. ಪಾದಗಳಿಗೆ ಡಿಯೋಡ್ರೆಂಟ್‌ ಕೂಡ ಸಿಂಪಡಿಸಿಕೊ ಳ್ಳಬಹುದು. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯಲು ಸಾಧ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...