alex Certify ಬಿಸಿ ಅನ್ನದ ಜತೆ ಸವಿದು ನೋಡಿ ‘ಸೌತೆಕಾಯಿ’ ತಂಬುಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಅನ್ನದ ಜತೆ ಸವಿದು ನೋಡಿ ‘ಸೌತೆಕಾಯಿ’ ತಂಬುಳಿ

ದಿನ ಸಾಂಬಾರು, ಸಾರು ಮಾಡಿ ಬೇಜಾರು ಎನ್ನುವವರು ಒಮ್ಮೆ ಈ ತಂಬುಳಿ ಮಾಡಿ ನೋಡಿ. ಥಟ್ ಅಂತ ಆಗಿಬಿಡುತ್ತದೆ. ಕೆಲಸವೂ ಕಡಿಮೆ ಜತೆಗೆ ಇದರ ರುಚಿಯೂ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

ಸೌತೆಕಾಯಿ – 1, ತೆಂಗಿನಕಾಯಿ ತುರಿ – 2 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು – 1 ಟೇಬಲ್ ಸ್ಪೂನ್, ಹಸಿಮೆಣಸು – 3, ಉಪ್ಪು – ರುಚಿಗೆ ತಕ್ಕಷ್ಟು, ಮೊಸರು – 1 ಕಪ್.

ಮಾಡುವ ವಿಧಾನ:

ಸೌತೆಕಾಯಿಯ ಸಿಪ್ಪೆ ತೆಗೆದು ಅದರ ಬೀಜ ತೆಗೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಸೌತೆಕಾಯಿ, ತೆಂಗಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ. ಇದನ್ನು ಮೊಸರಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿ ಅನ್ನದ ಜತೆ ಇದನ್ನು ಹಾಕಿಕೊಂಡು ಊಟ ಮಾಡುವುದಕ್ಕೆ ಚೆನ್ನಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...