alex Certify ಬಾಲಿವುಡ್ ಚಿತ್ರರಂಗಕ್ಕೆ ಶಿಖರ್ ಧವನ್ ಎಂಟ್ರಿ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಚಿತ್ರರಂಗಕ್ಕೆ ಶಿಖರ್ ಧವನ್ ಎಂಟ್ರಿ….?

ಬಾಲಿವುಡ್ ಚಿತ್ರರಂಗಕ್ಕೂ ಹಾಗೂ ಭಾರತೀಯ ಕ್ರಿಕೆಟ್ ತಂಡದ ನಡುವೆ ಅವಿನಾಭಾವ ಸಂಬಂಧವಿದೆ. ಅಲ್ಲದೆ ಕೆಲ ಐಪಿಎಲ್ ತಂಡಗಳಿಗೆ ಬಾಲಿವುಡ್ ನಟ – ನಟಿಯರೇ ಮಾಲೀಕರಾಗಿದ್ದಾರೆ. ಇನ್ನು ಭಾರತೀಯ ಕ್ರಿಕೆಟಿಗರ ಜೀವನ ಚರಿತ್ರೆ ಕುರಿತ ಕೆಲ ಬಾಲಿವುಡ್ ಚಿತ್ರಗಳು ಸಹ ತೆರೆಕಂಡಿವೆ.

ಕ್ರಿಕೆಟ್ ಆಟಗಾರರು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಸಹ ಹೊಸ ಸಂಗತಿಯೇನೂ ಅಲ್ಲ. ಇದೀಗ ಬಹಿರಂಗವಾಗಿರುವ ಮತ್ತೊಂದು ಸುದ್ದಿ ಎಂದರೆ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ಪೂರ್ಣಪ್ರಮಾಣದಲ್ಲಿ ಶಿಖರ್ ಧವನ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ಐಪಿಎಲ್ ನಲ್ಲಿ ಪಂಜಾಬ್ ತಂಡದ ಪರ ಆಟವಾಡುತ್ತಿರುವ ಶಿಖರ್ ಧವನ್ ಅವರ ಹೊಸ ಚಿತ್ರ ಈ ವರ್ಷದ ಅಂತ್ಯದೊಳಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...