alex Certify ನೂರು ವರ್ಷಗಳ ಹಿಂದಿನಿಂದಲೂ ಚೀನಾ ಆಯುರ್ವೇದ ಈ ಸೌಂದರ್ಯವರ್ಧಕವನ್ನೇ ನಂಬಿದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂರು ವರ್ಷಗಳ ಹಿಂದಿನಿಂದಲೂ ಚೀನಾ ಆಯುರ್ವೇದ ಈ ಸೌಂದರ್ಯವರ್ಧಕವನ್ನೇ ನಂಬಿದೆ…!

ಬಾದಾಮಿ ಕೇವಲ ತಿನ್ನುವುದಕ್ಕಷ್ಟೇ ಹಿತವಲ್ಲ. ಅದು ಅತ್ಯದ್ಭುತ ಸೌಂದರ್ಯವರ್ಧಕವು ಹೌದು. ಚೀನಾದ ಆಯುರ್ವೇದದಲ್ಲಿ ಬಾದಾಮಿ ಎಣ್ಣೆಯನ್ನು ನೂರಾರೂ ವರ್ಷಗಳಿಂದ ಬಳಸುತ್ತಿದ್ದಾರೆ. ತ್ವಚೆಯ ಮೃದುತ್ವ ಮತ್ತು ಕಾಂತಿಯನ್ನು ಇಮ್ಮಡಿಗೊಳಿಸುವ ಶಕ್ತಿ ಬಾದಾಮಿಗಿದೆ. ಈ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆಯಾದರೂ ಬಾದಾಮಿ ಎಣ್ಣೆಯಿಂದ ಮುಖವನ್ನು ಹತ್ತು ನಿಮಿಷ ಮಸಾಜ್ ಮಾಡುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಬಾದಾಮಿ ಎಣ್ಣೆಯಲ್ಲಿ ಏನಿದೆ ಗೊತ್ತಾ?

ಬಾದಾಮಿಯಲ್ಲಿರುವ ವಿಟಮಿನ್ ಎ ಹೊಸ ಚರ್ಮದ ಕೋಶಗಳ ಉತ್ಪಾದನೆಗೆ ನೆರವಾಗುತ್ತದೆ. ವಿಟಮಿನ್ ಇ ಪೋಷಕಾಂಶ ಜೀವಕೋಶದ ಹಾನಿಯನ್ನು ತಡೆಯುತ್ತದೆ. ಒಮೆಗಾ 3 ಫ್ಯಾಟಿ ಆಸಿಡ್ಸ್ ತ್ವಚೆಗೆ ಆವರಿಸುವ ಅಕಾಲಿಕ ಮುಪ್ಪನ್ನು ನಿವಾರಿಸುತ್ತದೆ. ಬಾದಾಮಿಯಲ್ಲಿರುವ ಸತುವಿನ ಅಂಶ ಮೊಡವೆ ಬಾರದಂತೆ ತಡೆಯುತ್ತದೆ.

ಬಾದಾಮಿ ಎಣ್ಣೆಯ ಪ್ರಯೋಜನಗಳು

ಕಣ್ಣಿನ ಊತ ಕಡಿಮೆ ಆಗುತ್ತದೆ : ಕೆಲವರಿಗೆ ಕಣ್ಣಿನ ಸುತ್ತಲೂ ಊತ ಕಂಡು ಬರುತ್ತದೆ. ಬಾದಾಮಿ ಎಣ್ಣೆಯ ಮಸಾಜ್ನಿಂದ ಇದಕ್ಕೆ ಉಪಶಮನ ಸಿಗುತ್ತದೆ.

ತ್ವಚೆಗೆ ಉತ್ತಮ ಬಣ್ಣ ನೀಡುತ್ತದೆ: ತ್ವಚೆಯ ಕಲೆಗಳನ್ನು ಮಾಯಾ ಮಾಡಿ ಸರಿಯಾದ ಸ್ಕಿನ್ ಟೋನ್ ನೀಡುತ್ತದೆ.

ತ್ವಚೆಯ ಶುಷ್ಕತೆ ನಿವಾರಿಸುತ್ತದೆ : ಒಣ ಚರ್ಮದಿಂದ ಉಂಟಾಗುವ ಸೋರಿಯಾಸಿಸ್ ನಂತಹ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಬಿರುಕು, ಶುಷ್ಕತೆ ನಿಯಂತ್ರಿಸಲು ನಿಯಮಿತವಾಗಿ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದು ಪ್ರಯೋಜನಕಾರಿ.

ಮೊಡವೆ ನಿಯಂತ್ರಣ : ಬಾದಾಮಿ ಎಣ್ಣೆಯಲ್ಲಿರುವ ಕೊಬ್ಬಿನ ಅಂಶದ ಕಾರಣದಿಂದಾಗಿ ತ್ವಚೆಯ ಮೇಲಿನ ಹೆಚ್ಚಿನ ಎಣ್ಣೆ ಅಂಶವು ನಿವಾರಣೆಯಾಗುತ್ತದೆ. ಆ ಮೂಲಕ ತ್ವಚೆಯಲ್ಲಿ ಉಂಟಾಗುವ ಮೊಡವೆಗಳಿಂದ ಮುಕ್ತಿ ಹೊಂದಬಹುದು.

ಸೂರ್ಯನ ಕಿರಣಗಳಿಂದ ರಕ್ಷಣೆ : ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿದ್ದು, ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...