alex Certify ತುಟಿ ಒಡೆಯುವ ಸಮಸ್ಯೆಗೆ ಈಗ ಹೇಳಿ ಬೈ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಟಿ ಒಡೆಯುವ ಸಮಸ್ಯೆಗೆ ಈಗ ಹೇಳಿ ಬೈ ಬೈ

ಚಳಿಗಾಲ ಬಂದಾಯ್ತಲ್ಲಾ, ನಿಮ್ಮ ತುಟಿಯೂ ಒಡೆಯುತ್ತಿದೆಯೇ…? ರಾಸಾಯನಿಕಗಳನ್ನು ಬೆರೆಸಿದ ಲಿಪ್ ಬಾಮ್ ಗಳನ್ನು ಹಚ್ಚುವ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಆಕರ್ಷಕ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಹಾಲಿನ ಉತ್ಪನ್ನಗಳಾದ ಬೆಣ್ಣೆ ಹಾಗೂ ತುಪ್ಪವನ್ನು ತುಟಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತುಟಿ ಒಡೆಯುವುದಿಲ್ಲ.

ಎರಡರಿಂದ ಮೂರು ದಿನಗಳೊಳಗೆ ನಿಮ್ಮ ತುಟಿ ಒಡೆಯುವ ಸಮಸ್ಯೆ ದೂರವಾಗುವುದು ಮಾತ್ರವಲ್ಲ, ಆಕರ್ಷಕ ಗುಲಾಬಿ ಬಣ್ಣದ ತುಟಿ ನಿಮ್ಮದಾಗುತ್ತದೆ.

ನಿತ್ಯ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತುಟಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತುಟಿ ಒಣಗುವ ಸಮಸ್ಯೆ ದೂರವಾಗುತ್ತದೆ. ತುಟಿ ಮೃದುವಾಗುತ್ತದೆ. ನಿತ್ಯ ಜೇನನ್ನು ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಹೆಚ್ಚುತ್ತದೆ.

ದೇಹಕ್ಕೆ ಉಷ್ಣವಾದರೂ ತುಟಿಯ ಸಿಪ್ಪೆ ಏಳುತ್ತದೆ. ಇದರ ನಿವಾರಣೆಗೆ ಸಾಕಷ್ಟು ನೀರು ಕುಡಿಯಬೇಕು. ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆಯಾದರೂ ಮರೆಯದೆ ನೀರು ಕುಡಿಯುತ್ತಿರಿ. ಇದರಿಂದ ತುಟಿ ಒಣಗುವ ಸಮಸ್ಯೆ ಕಡಿಮೆಯಾಗುತ್ತದೆ.

ಪೆಟ್ರೋಲಿಯಂ ಉತ್ಪನ್ನಗಳಾದ ವ್ಯಾಸಲಿನ್, ಬಯೊಲಿನ್ ನಂಥ ಉತ್ಪನ್ನಗಳನ್ನು ಬಳಸಿ. ಇದು ನಿಮ್ಮ ತುಟಿಗೆ ತೇವಾಂಶವನ್ನು ಒದಗಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...