alex Certify ತಾನು ಗುಣದಲ್ಲಿಯೂ ಅಪ್ಪಟ ‘ಚಿನ್ನ’ ಎಂದು ಸಾಬೀತುಪಡಿಸಿದ ನೀರಜ್​ ಚೋಪ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾನು ಗುಣದಲ್ಲಿಯೂ ಅಪ್ಪಟ ‘ಚಿನ್ನ’ ಎಂದು ಸಾಬೀತುಪಡಿಸಿದ ನೀರಜ್​ ಚೋಪ್ರಾ

ಚಿನ್ನದ ಹುಡುಗ ನೀರಜ್​ ಚೋಪ್ರಾ ತಾನು ಗುಣದಲ್ಲಿಯೂ ಅಪ್ಪಟ ಚಿನ್ನ ಎಂದು ತೋರಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೃದ್ಧ ಅಭಿಮಾನಿಯೊಬ್ಬರ ಕಾಲಿಗೆರಗಿ ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಆಶೀರ್ವಾದವನ್ನು ಪಡೆಯುತ್ತಿರುವ ವಿಡಿಯೋ ಟ್ವಿಟರ್​ನಲ್ಲಿ ವೈರಲ್​ ಆಗಿದೆ.

ಅಭಿಮಾನಿಗಳು ತನ್ನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ ಪ್ರತಿಯೊಬ್ಬರಿಗೂ ನೀರಜ್​ ಚೋಪ್ರಾ ಅತ್ಯಂತ ವಿನಮ್ರತೆಯಿಂದ ಧನ್ಯವಾದ ತಿಳಿಸಿದರು. ಅಭಿಮಾನಿಗಳು ಹೊರಡುತ್ತಿದ್ದ ಸಂದರ್ಭದಲ್ಲಿ ಹಿರಿಯ ವ್ಯಕ್ತಿಯನ್ನು ನೋಡಿದ ನೀರಜ್​ ಚೋಪ್ರಾ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.

ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ನೀರಜ್​ ಚೋಪ್ರಾ ಎಂತಹ ಸರಳ ವ್ಯಕ್ತಿ ಎಂದು ನೆಟ್ಟಿಗರು ಬಾಯ್ತುಂಬಾ ಹೊಗಳುತ್ತಿದ್ದಾರೆ.

ನೀರಜ್​ ಚೋಪ್ರಾ ತಮ್ಮ ಸಭ್ಯತೆಯ ಕಾರಣದಿಂದಾಗಿ ಮತ್ತೊಮ್ಮೆ ಭಾರತೀಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅನೇಕರು ಈ ವಿಡಿಯೋವನ್ನು ರಿ ಟ್ವೀಟ್​ ಮಾಡಿದ್ದಾರೆ. ಟ್ವೀಟಿಗರೊಬ್ಬರು ನಾನು ಈ ವ್ಯಕ್ತಿಯ ದೊಡ್ಡ ಅಭಿಮಾನಿ. ಇವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಏರಲಿದ್ದಾರೆ. ತ್ರಿವರ್ಣ ಧ್ವಜವನ್ನು ಇನ್ನೂ ಎತ್ತರಕ್ಕೆ ಹಾರಿಸಲಿದ್ದಾರೆ ಎಂದು ಹೇಳಿದ್ದಾರೆ.

— Your ❤️ (@ijnani) June 30, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...