alex Certify ಡಿಸೆಂಬರ್ 8ಕ್ಕೆ ಯು ಟರ್ನ್ 2 ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ 8ಕ್ಕೆ ಯು ಟರ್ನ್ 2 ಟ್ರೈಲರ್

ಡಿಸೆಂಬರ್ 16ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಕಥಾಹಂದರ ಹೊಂದಿರುವ ‘ಯು ಟರ್ನ್ 2’ ಸಿನಿಮಾದ ಟ್ರೈಲರ್ ಡಿಸೆಂಬರ್ 8ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಚಂದ್ರು ಓಬಯ್ಯ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪೂಜಾ ನಾಯಕಿಯಾಗಿ ಅಭಿನಯಿಸಿದ್ದು, ವಿಕ್ಟರಿ ವಾಸು, ಮಜಾ ಭಾರತ ಮಂಜು, ರಾಘು ಕಿರಿಕ್ ಪಾರ್ಟಿ, ಕರಿ ಸುಬ್ಬು, ಉಗ್ರಂ ರವಿ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಎಸ್ ಎಂ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಆನಂದ್ ಸಂಪರಗಿ ಬಂಡವಾಳ ಹೂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...