ಜೀವನದ ಅನಿಶ್ಚಿತೆಗಳನ್ನು ಎದುರಿಸಲು ಮತ್ತು ಆರ್ಥಿಕ ತೊಂದರೆಗಳಿಂದ ಹೊರಬರಲು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ನೆರವಾಗುತ್ತದೆ. ಇದೇ ರೀತಿ ನೆರವಾಗಲು ‘ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಲ್ಲಿ ವಾರ್ಷಿಕ ಕೇವಲ 436 ರೂಪಾಯಿ ಪ್ರೀಮಿಯಂ ಪಾವತಿಸಿ 2 ಲಕ್ಷ ರೂಪಾಯಿಗಳ ಜೀವ ವಿಮಾ ಸುರಕ್ಷೆ ಪಡೆಯಬಹುದಾಗಿದ್ದು, 18ರಿಂದ 50 ವರ್ಷದವರು ಇದರಲ್ಲಿ ನೋಂದಾಯಿಸಿಕೊಳ್ಳಬಹುದು.
ಅದೇ ರೀತಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ವಾರ್ಷಿಕ ಕೇವಲ 20 ರೂಪಾಯಿಗಳ ಪ್ರೀಮಿಯಂ ಪಾವತಿಸಿದರೆ 2 ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮೆ ಸುರಕ್ಷೆ ಸಿಗಲಿದ್ದು, ಇದರಲ್ಲಿ 18ರಿಂದ 70 ವರ್ಷಗಳೊಳಗಿನವರು ನೋಂದಾಯಿಸಿಕೊಳ್ಳಬಹುದಾಗಿದೆ.
ಆಸಕ್ತರು ಹತ್ತಿರದ ಬ್ಯಾಂಕ್ ಶಾಖೆಯನ್ನಾಗಲಿ ಅಥವಾ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದ್ದು, ಚಂದಾದಾರರ ಬ್ಯಾಂಕ್ / ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಂ ನ ಸ್ವಯಂ ಡೆಬಿಟ್ ದಾವೆಯ ಮೊಬಲಗು ಹಕ್ಕುದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ.