alex Certify ಕೆಂಪು ಪಾಂಡಾಗಳ ಮೋಹಕ ಗುದ್ದಾಟಕ್ಕೆ ನೆಟ್ಟಿಗರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಪಾಂಡಾಗಳ ಮೋಹಕ ಗುದ್ದಾಟಕ್ಕೆ ನೆಟ್ಟಿಗರು ಫಿದಾ..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ನೋಡಲು ಬಹಳ ಮನಮೋಹಕವಾಗಿರುತ್ತದೆ. ಅವುಗಳು ಏನೇ ಮಾಡಿದ್ರೂ ಬಹಳ ಮುದ್ದಾಗಿ ಕಾಣುತ್ತವೆ. ಹಾಗೆಯೇ ಪಾಂಡಾಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ದೈತ್ಯ ಪಾಂಡಾಗಳಂತೆ, ಕೆಂಪು ಪಾಂಡಾಗಳು ಹೆಚ್ಚು ಸಮಯ ತಿನ್ನಲು ಮತ್ತು ಮಲಗಲು ಇಷ್ಟಪಡುತ್ತವೆ. ಇದೀಗ ಕೆಂಪು ಪಾಂಡಾಗಳ ಮುದ್ದಾದ ಫೈಟಿಂಗ್ ವಿಡಿಯೋ ವೈರಲ್ ಆಗಿದೆ.

ಎರಡು ಕೆಂಪು ಪಾಂಡಾಗಳು ಆಕ್ರಮಣಕಾರಿಯಾಗಿ ಕಾದಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ, ಅವು ಆಡುತ್ತಿರುವಂತೆ ತೋರುತ್ತಿದೆ. ಕೆಂಪು ಪಾಂಡಾಗಳು ಪೂರ್ವ ಹಿಮಾಲಯ ಮತ್ತು ನೈಋತ್ಯ ಚೀನಾಕ್ಕೆ ಸ್ಥಳೀಯವಾಗಿರುವುದರಿಂದ, ಅವು ಸಾಮಾನ್ಯವಾಗಿ ಹಿಮಭರಿತ ಅಥವಾ ಮಳೆಯ ಪರ್ವತ ಕಾಡುಗಳಲ್ಲಿ ಕಂಡುಬರುತ್ತವೆ.

ಎರಡು ಮುದ್ದಾದ ಪುಟ್ಟ ಕೆಂಪು ಪಾಂಡಾಗಳು ಪರಸ್ಪರ ಫೈಟಿಂಗ್ ಮಾಡುವ ಮುನ್ನ ಮುಖಾಮುಖಿಯಾಗಿ ನಿಂತಿವೆ. ಹಿಮದಿಂದ ಆವೃತ್ತವಾದ ತಮ್ಮ ಆವರಣದಲ್ಲಿ ಹೋರಾಡಲು ಸಿದ್ಧವಾಗಿದೆ. ನಂತರ ಅವೆರಡೂ ಪರಸ್ಪರ ಒಂದನ್ನೊಂದು ಕೋಪದಿಂದ ನಿಭಾಯಿಸುತ್ತದೆ. ನಂತರ ಪರಸ್ಪರ ಆಕ್ರಮಣ ಮಾಡುವ ಪ್ರಯತ್ನದಲ್ಲಿ ಹಿಮದಲ್ಲಿ ಉರುಳಲು ಪ್ರಾರಂಭಿಸುತ್ತವೆ. ಇದು ನೋಡೋದಕ್ಕೆ ಬಹಳ ಮುದ್ದಾಗಿ ಕಾಣುತ್ತದೆ. ನೆಟ್ಟಿಗರು ಈ ವಿಡಿಯೋವನ್ನು ಮನಸಾರೆ ಇಷ್ಟಪಟ್ಟಿದ್ದು, ಕೆಂಪು ಪಾಂಡಾಗಳು ಪ್ರೀತಿಯಿಂದ ಕಾದಾಡುತ್ತಿರುವುದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

— Buitengebieden (@buitengebieden) May 20, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...