alex Certify ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಯುವಕ….! ಇಲ್ಲಿದೆ ಶಾಕಿಂಗ್ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಯುವಕ….! ಇಲ್ಲಿದೆ ಶಾಕಿಂಗ್ ಸ್ಟೋರಿ

ದೆಹಲಿ- ತಲೆಯೆಲ್ಲಾ ಬೋಳಾಗಿದೆ. ಜನ ಏನಂತರೋ ಅನ್ನೋ ಕಾರಣಕ್ಕೆ ಅನೇಕ ಔಷಧಿಗಳನ್ನು ತೆಗೆದುಕೊಳ್ಳೋದನ್ನ ನೋಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ ಮಾಡಿಸುವವರ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಇದರಿಂದ ಕೆಲವೊಬ್ಬರಿಗೆ ಒಳ್ಳೆಯದು ಆದರೆ ಮತ್ತೊಂದಿಷ್ಟು ಜನರಿಗೆ ಸಮಸ್ಯೆಯೂ ಆಗಿದ್ದುಂಟು. ಇದೀಗ ವೈದ್ಯರ ಯಡವಟ್ಟಿನಿಂದ ಕೂದಲು ಕಸಿ ಮಾಡಿಕೊಳ್ಳಲು ಹೋದ ವ್ಯಕ್ತಿಯೊಬ್ಬನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ಹೌದು, ದೆಹಲಿಯ ವ್ಯಕ್ತಿ ಅಥರ್ ರಶೀದ್ ಎಂಬ 30 ವರ್ಷದ ವ್ಯಕ್ತಿಯೊಬ್ಬ ಕೂದಲ ಕಸಿ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಿದ್ದರು ಕೂದಲ ಕಸಿ ಮಾಡಿಸಿಕೊಂಡ ನಂತರ ರಶೀದ್ ಗೆ ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾರೆ. ಈ ಕೂದಲು ಕಸಿ ನೋವಿನಿಂದಲೇ ಬಹು ಅಂಗಾಂಗ ವೈಫಲ್ಯ ಉಂಟಾಗಿರೋದು ಎಂದು ಹೇಳಲಾಗುತ್ತಿದೆ.

ಕೂದಲ ಶಸ್ತ್ರಚಿಕಿತ್ಸೆಯ ಬಳಿಕ ಮೈಮೇಲೆ ಗುಳ್ಳೆಗಳಾಗಿದ್ದವು ಎಂದು ರಶೀದ್ ತಾಯಿ ಆಸಿಯಾ ಬೇಗಂ ಹೇಳಿದ್ದಾರೆ. ಈ ಸಂಬಂಧ ರಶೀದ್ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...