alex Certify ಕಾರು ಬಿಟ್ಟು ಪುಟ್ಟ ಸೈಕಲ್‌ನಂತಹ ಸ್ಕೂಟರ್‌ ಏರಿದ ನಟ, ಬುಲೆಟ್‌ಗಿಂತ ಕಮ್ಮಿ ಏನಿಲ್ಲ ಇದರ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಬಿಟ್ಟು ಪುಟ್ಟ ಸೈಕಲ್‌ನಂತಹ ಸ್ಕೂಟರ್‌ ಏರಿದ ನಟ, ಬುಲೆಟ್‌ಗಿಂತ ಕಮ್ಮಿ ಏನಿಲ್ಲ ಇದರ ಬೆಲೆ….!

ಸದಾ ಐಷಾರಾಮಿ ಕಾರಿನಲ್ಲಿ ಓಡಾಡ್ತಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚೆಗೆ ಪುಟ್ಟ ಸೈಕಲ್‌ನಂತಹ ಸ್ಕೂಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಹೆಸರು ಮೇಟ್-ಎಕ್ಸ್ ಇ ಬೈಕ್‌. ಪುಟಾಣಿ ಎಲೆಕ್ಟ್ರಿಕ್‌ ಸ್ಕೂಟರ್‌ ಏರಿ ಬರ್ತಿದ್ದ ನಟನನ್ನು ಜನರು ಕೂಡ ಅಚ್ಚರಿಯಿಂದ ವೀಕ್ಷಿಸಿದ್ದಾರೆ.

ಈ ಬೈಕ್‌ ಸೈಕಲ್‌ನಂತೆ ಕಂಡರೂ ಅದರ ವಿಶೇಷತೆಗಳು ಸಾಕಷ್ಟಿವೆ. ಬೆಲೆ ಕೂಡ ಕಡಿಮೆಯೇನಿಲ್ಲ. ಬೆಲೆ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ಗೆ ಸರಿಸಮಾನವಾಗಿದೆ. ಮೇಟ್-ಎಕ್ಸ್ ಮಡಚಬಹುದಾದ ಇ-ಬೈಕ್‌. ಇದರ ಬೆಲೆ ಅಂದಾಜು 1.45 ಲಕ್ಷ ರೂಪಾಯಿ.

ಮೇಟ್ ಎಕ್ಸ್ ಇ-ಬೈಕ್‌ನ ತೂಕ 62.8 ಪೌಂಡ್‌ಗಳಷ್ಟಿದೆ. ಇದರ ಫ್ರೇಮ್ ಅಲ್ಯೂಮಿನಿಯಂನದ್ದು. ಬೈಸಿಕಲ್‌ನ ಟೈರ್ ಗಾತ್ರ 20X4.0 ಇಂಚುಗಳು. ಇದು 250W ಬ್ರಶ್‌ಲೆಸ್ ಗೇರ್ಡ್ ರಿಯರ್ ಹಬ್ ಮೋಟಾರ್ ಅನ್ನು ಪಡೆಯುತ್ತದೆ. 48V, 17Ah ಬ್ಯಾಟರಿಗೆ ಸಂಪರ್ಕ ಹೊಂದಿದೆ. ಒಮ್ಮೆ ಚಾರ್ಜ್‌ ಮಾಡಿದ್ರೆ ಇದು 120 ಕಿಮೀ ಓಡಬಲ್ಲದು, ಗರಿಷ್ಠ ವೇಗ ಗಂಟೆಗೆ 24 ಕಿಮೀ ಮಾತ್ರ.

ಇದು ಟೆಕ್ಟ್ರೋ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದು ಫೋಲ್ಡೇಬಲ್‌ ಆಗಿರೋದ್ರಿಂದ ಮಡಚಿ ನೀವು ಎಲ್ಲಿ ಬೇಕಾದ್ರೂ ಇಡಬಹುದು. ಕಾರಿನಲ್ಲಿ ಆರಾಮವಾಗಿ ಇರಿಸಿಕೊಳ್ಳಲು ಸಹ ಸಾಧ್ಯವಾಗುತ್ತದೆ. ಈ ಬೈಕ್‌ ಅಗ್ಗವೇನಲ್ಲ. ಇದರ ಬೆಲೆ ರಾಯಲ್ ಎನ್‌ಫೀಲ್ಡ್ ಬುಲೆಟ್ 350ಗೆ ಸಮನಾಗಿದೆ. ಈ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಿವೆ. ಆದರೆ ಇದು ಫೋಲ್ಡೇಬಲ್‌ ಎನ್ನುವುದೇ ವಿಶೇಷತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...