alex Certify ಕಣ್ಣು ಕೆಂಪಾಗುವ ಸಮಸ್ಯೆಗೆ ಈ ʼಮನೆ ಮದ್ದʼನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣು ಕೆಂಪಾಗುವ ಸಮಸ್ಯೆಗೆ ಈ ʼಮನೆ ಮದ್ದʼನ್ನು ಬಳಸಿ

ಕಣ್ಣಿನಲ್ಲಿ ಧೂಳು ಸೇರಿಕೊಂಡಾಗ ಅಲರ್ಜಿಯಾಗಿ ಕಣ್ಣು ಕೆಂಪಾಗುತ್ತದೆ. ಇದರಿಂದ ಕೆಲವೊಮ್ಮೆ ಕಣ್ಣುಗಳು ಊದಿಕೊಳ್ಳುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದು ಬಳಸಿ.

2 ಕಾಟನ್ ಪ್ಯಾಡ್ ಗಳನ್ನು ರೋಸ್ ವಾಟರ್ ನಲ್ಲಿ ನೆನೆಸಿ ನಿಮ್ಮ ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಅವುಗಳನ್ನು 15 ನಿಮಿಷಗಳ ಕಾಲ ಬಿಡಿ. ಇದನ್ನು ಪ್ರತಿದಿನ 2 ಬಾರಿ ಮಾಡಬೇಕು. ರೋಸ್ ವಾಟರ್ ನಿಂದ ಉರಿಯೂತದ ಗುಣಗಳು, ನಿಮ್ಮ ಕಣ್ಣು ನೋವನ್ನು ಕಡಿಮೆ ಮಾಡಿ ಕೆಂಪು ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.

ಸೌತೆಕಾಯಿಯ 2 ಪೀಸ್ ಗಳನ್ನು ತೆಗೆದುಕೊಂಡು ಕಣ್ಣಿನ ಮೇಲೆ ಇಟ್ಟುಕೊಳ್ಳಿ. 30 ನಿಮಿಷಗಳ ಕಾಲ ಹಾಗೇ ಬಿಡಿ. ಇದನ್ನು ಪ್ರತಿದಿನ ಮಾಡಿ. ಸೌತೆಕಾಯಿ ರಕ್ತನಾಳಗಳನ್ನು ಕುಗ್ಗಿಸಿ ಮತ್ತು ಕಣ್ಣಿಗೆ ತಂಪನ್ನು ನೀಡುತ್ತದೆ. ಇದರಿಂದ ಕೆಂಪು ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...