alex Certify ಓಲೇಕಾರ್ ಗೆ ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ಒತ್ತಾಯ; ಮಂತ್ರಿಗಿರಿ ನೀಡದಿದ್ದರೆ ಹಾವೇರಿ ಬಂದ್ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲೇಕಾರ್ ಗೆ ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ಒತ್ತಾಯ; ಮಂತ್ರಿಗಿರಿ ನೀಡದಿದ್ದರೆ ಹಾವೇರಿ ಬಂದ್ ಎಚ್ಚರಿಕೆ

ಬೆಂಗಳೂರು: ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆ ಪಟ್ಟಿಗೆ ಅಂತಿಮ ಮುದ್ರೆ ಬೀಳಲು ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಮಂತ್ರಿ ಸ್ಥಾನಕ್ಕಾಗಿ ಶಾಸಕರು ಕೊನೇ ಕ್ಷಣದ ಕಸರತ್ತು ನಡೆಸಿದ್ದಾರೆ. ಮಾಜಿ ಸಿಎಂ ಬಿಎಸ್ ವೈ ನಿವಾಸಕ್ಕೆ ದೌಡಾಯಿಸಿರುವ ಶಾಸಕ ಓಲೇಕಾರ್, ಪರಮಣ್ಣ ಮುನವಳ್ಳಿ, ಬೆಳ್ಳಿ ಪ್ರಕಾಶ್ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.

ಒಂದೆಡೆ ಶಾಸಕರು ಬಿಎಸ್ವೈ ಕಾವೇರಿ ನಿವಾಸಕ್ಕೆ ತೆರಳಿ ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಒತ್ತಡ ತಂತ್ರ ಹೆಣೆದಿದ್ದರೆ ಇನ್ನೊಂದೆಡೆ ಶಾಸಕರ ಬೆಂಬಲಿಗರು ಕಾವೇರಿ ನಿವಾಸದ ಎದುರು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.

6ನೇ ಮದುವೆಯಾದ ಆರೋಪದ ಮೇಲೆ ಮಾಜಿ ಸಚಿವನ ವಿರುದ್ಧ ಪತ್ನಿಯಿಂದ ದೂರು

ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಓಲೇಕಾರ್ ಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ನಿಡಬೇಕು. ಒಂದು ವೇಳೆ ಓಲೇಕಾರ್ ಗೆ ಮಂತ್ರಿ ಸ್ಥಾನ ನೀಡದಿದ್ದರೆ ಹಾವೇರಿ ಜಿಲ್ಲೆ ಬಂದ್ ಮಾಡಿ ಉಗ್ರ ಹೋರಾಟ ನಡೆಸುತ್ತೇವೆ. ಸಿಎಂ ಬೊಮ್ಮಾಯಿ ಜಿಲ್ಲೆಗೆ ಕಾಲಿಡಲು ಬಿಡಲ್ಲ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಶಾಸಕ ಪರಮಣ್ಣ ಮುನವಳ್ಳಿ ಬೆಂಬಲಿಗರು ಮುನವಳ್ಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಘೋಷಣೆಗಳನ್ನು ಕೂಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...