alex Certify ಈ ರೀತಿ ಒಮ್ಮೆ ಮಾಡಿ ʼಚನ್ನಾ ಮಸಾಲʼ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೀತಿ ಒಮ್ಮೆ ಮಾಡಿ ʼಚನ್ನಾ ಮಸಾಲʼ…!

ಪೂರಿ, ಚಪಾತಿ ಮಾಡಿದಾಗ ಒಮ್ಮೆ ಈ ರೀತಿಯಾಗಿ ಚನ್ನಾ ಮಸಾಲ ಮಾಡಿಕೊಂಡು ಸವಿಯಿರಿ. ಇದು ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ.

ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ½ ಚಮಚ ಜೀರಿಗೆ, 1 ಚಮಚ ಅಕ್ಕಿ, 1 ಚಮಚ ಕೊತ್ತಂಬರಿ ಬೀಜ ಹಾಕಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಸಣ್ಣ ಪೀಸ್ ಚಕ್ಕೆ, 2 ಲವಂಗ ಹಾಕಿ ಫ್ರೈ ಮಾಡಿ ಒಂದು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿಕೊಳ್ಳಿ.

ಒಂದು ಕುಕ್ಕರ್ ಗೆ 1 ಕಪ್ ನೆನೆಸಿದ ಬಿಳಿ ಕಡಲೆ, 2 ಕಪ್ ನೀರು, 1 ಪಲಾವ್ ಎಲೆ ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ 1 ದೊಡ್ಡ ಈರುಳ್ಳಿಯನ್ನು ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಸಣ್ಣಗೆ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ರುಬ್ಬಿಟ್ಟುಕೊಂಡ ಈರುಳ್ಳಿಯನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ,

ನಂತರ ಅದಕ್ಕೆ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಬಳಿಕ ಇದಕ್ಕೆ 1 ಚಮಚ ಖಾರದ ಪುಡಿ, 1 ಟೀ ಸ್ಪೂನ್ ಅರಿಶಿನ, ಚಿಟಿಕೆ ಗರಂ ಮಸಾಲ ಹಾಕಿ ಫ್ರೈ ಮಾಡಿ. ಇದಕ್ಕೆ 2 ಟೊಮೆಟೊವನ್ನು ರುಬ್ಬಿ ಹಾಕಿ ನೀರಿನ ಪಸೆ ಆರುವವರಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಪುಡಿ ಮಾಡಿಟ್ಟುಕೊಂಡ ಮಸಾಲೆ ಸೇರಿಸಿ ಫ್ರೈ ಮಾಡಿ.

ನಂತರ ಬೇಯಿಸಿಟ್ಟುಕೊಂಡ ಕಡಲೆಯನ್ನು ಹಾಕಿ ನೀರು ಸೇರಿಸಿ ಉಪ್ಪು ಹಾಕಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಸ್ವಲ್ಪ ಕಸೂರಿ ಮೇಥಿ ಹಾಕಿ. ಬಳಿಕ ಒಂದು ಒಗ್ಗರಣೆ ಪಾತ್ರೆಗೆ 1 ಚಮಚ ತುಪ್ಪ ಹಾಕಿ ಅದಕ್ಕೆ 2 ಎಸಳು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ 1 ಹಸಿಮೆಣಸು ಸೀಳಿ ಹಾಕಿ. ಅದಕ್ಕೆ ಚಿಟಿಕೆ ಅರಿಶಿನ, 1 ಟೀ ಸ್ಪೂನ್ ಖಾರದಪುಡಿ ಹಾಕಿ ಫ್ರೈ ಮಾಡಿಕೊಂಡು ಕಡಲೆಕಾಳಿನ ಮಿಶ್ರಣಕ್ಕೆ ಸೇರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...