alex Certify ಆಲೂಗಡ್ಡೆ ದರದಲ್ಲಿ ಭಾರಿ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ರೈತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲೂಗಡ್ಡೆ ದರದಲ್ಲಿ ಭಾರಿ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ರೈತರು

ಪಂಜಾಬ್ ನಲ್ಲಿ ಆಲೂಗಡ್ಡೆ ದರ ಭಾರಿ ಕುಸಿತ ಕಂಡಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಜಿ ಆಲೂಗಡ್ಡೆ ನಾಲ್ಕು ರೂಪಾಯಿಗೆ ಮಾರಾಟವಾಗುತ್ತಿದ್ದು, ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.

ಪಂಜಾಬ್ ನಲ್ಲಿ ಈ ಬಾರಿ 1.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದು, 31.50 ಲಕ್ಷ ಮೆಟ್ರಿಕ್ ಟನ್ ಫಸಲು ಬಂದಿದೆ. ಅಲ್ಲದೆ, ಪಂಜಾಬಿನಿಂದ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ್ ಸೇರಿದಂತೆ ಹಲವು ರಾಜ್ಯಗಳಿಗೆ ಆಲೂಗಡ್ಡೆ ಸರಬರಾಜು ಮಾಡಲಾಗುತ್ತಿತ್ತು.

ಆದರೆ ಈ ಬಾರಿ ಈ ರಾಜ್ಯಗಳಲ್ಲೂ ಸಹ ಉತ್ತಮ ಫಸಲು ಬಂದಿರುವುದರಿಂದ ಪಂಜಾಬಿನ ಆಲೂಗಡ್ಡೆಯ ಬೇಡಿಕೆ ಕುಸಿದಿದೆ. ಹೀಗಾಗಿ ಅತಿ ಕನಿಷ್ಠ ಮಟ್ಟಕ್ಕೆ ಆಲೂಗಡ್ಡೆಯ ಬೆಲೆ ಕುಸಿದಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...