
ಅರಣ್ಯ ಇಲಾಖೆಯು ಆನೆಯನ್ನು ಕಂದಕದಿಂದ ರಕ್ಷಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆರ್ಕಿಮಿಡಿಸ್ ತತ್ವವನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಗಜರಾಜನನ್ನು ರಕ್ಷಣೆ ಮಾಡಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಯುನೈಸ್ ಚಂಡಮಾರುತಕ್ಕೆ ಯುಕೆ ತತ್ತರ: ಚಲಿಸುತ್ತಿದ್ದ ಬಸ್ ಮೇಲೆಯೇ ಉರುಳಿಬಿದ್ದ ಮರ…..!
ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಆನೆಯೊಂದು ಕಂದಕಕ್ಕೆ ಬಿದ್ದಿದೆ. ಹೊಂಡ ಸಾಕಷ್ಟು ಆಳವಾಗಿದ್ದರಿಂದ ಆನೆಗೆ ಎದ್ದು ಬರಲು ಸಾಧ್ಯವಾಗಿಲ್ಲ. ಹೀಗಾಗಿ, ಆನೆಯನ್ನು ರಕ್ಷಿಸಲು ಅರಣ್ಯ ರಕ್ಷಕರ ತಂಡ ಅದ್ಭುತವಾಗಿ ಕೆಲಸ ಮಾಡಿದೆ. ಹೊಂಡಕ್ಕೆ ನೀರು ತುಂಬಿಸಿದ ಅವರು, ಆನೆಯನ್ನು ಮೇಲಕ್ಕೆ ತೇಲುವಂತೆ ಮಾಡಿದೆ. ನಂತರ ಹಗ್ಗಗಳ ಸಹಾಯದಿಂದ ಆನೆಯನ್ನು ಮೇಲೆತ್ತಿ ರಕ್ಷಿಸಿದೆ.
ಮಧ್ಯರಾತ್ರಿ 1 ಗಂಟೆಗೆ ಅರಣ್ಯ ಇಲಾಖೆಗೆ ಆನೆ ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ದೊರಕಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಡಿಎಫ್‌ಒ ಸಂದೀಪ್ ಬೆರ್ವಾಲ್ ಮತ್ತು ಎಡಿಎಫ್‌ಒಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮುಂಜಾನೆ 4 ಗಂಟೆ ವೇಳೆಗೆ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.